3.jpeg)
ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ನಿಂದ ನಟಿ ಪಾರು.!
ಮುಂಬೈ: ಹೈ ಪ್ರೊಫೈಲ್ ಸೆಕ್ಸ್ ರಾಕೆಟ್‌ನಿಂದ ಸಾವ್‌ಧಾನ್ ಇಂಡಿಯಾ ನಟಿ ಸೇರಿದಂತೆ ಮೂವರನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ. ಅಂಧೇರಿ ಉಪನಗರದ ತ್ರೀ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ದಂಧೆಯನ್ನು ಮುಂಬೈ ಪೊಲೀಸರು ಬೇಧಿಸಿದ್ದು, ದಂಧೆ ನಡೆಸುತ್ತಿದ್ದ ಪ್ರಿಯಾ ಶರ್ಮಾ ಎಂಬಾಕೆಯನ್ನು ಬಂಧಿಸಿದ್ದಾರೆ.
ಸಿಟಿ ಪೊಲೀಸ್ ವಿಭಾಗದ ಸೋಷಿಯಲ್ ಸರ್ವೀಸ್ ಬ್ರಾಂಚ್ ಗುರುವಾರ ಅಂಧೇರಿಯಲ್ಲಿರುವ ತ್ರೀ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ್ದರು. ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಜಾಲವನ್ನು ಮಂಬೈ ಪೊಲೀಸರು ಬೇಧಿಸಿದ್ದಾರೆ. ದಂಧೆ ನಡೆಸುತ್ತಿದ್ದ 29 ವರ್ಷದ ಮಹಿಳೆ ಪ್ರಿಯಾ ಎಂಬಾಕೆಯನ್ನು ಅರೆಸ್ಟ್ ಮಾಡಲಾಗಿದೆ. ಜಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದ ಒಬ್ಬ ಅಪ್ರಾಪ್ತೆ ಸೇರಿದಂತೆ ಮೂವರು ಮಹಿಳಾ ನಟಿಯರನ್ನು ಪೊಲೀಸರು ರಕ್ಷಿಸಿದ್ದಾರೆ.