
ಹವಮಾನದಲ್ಲಿ ಬದಲಾವಣೆ: ರಾಜ್ಯದಲ್ಲಿ ವರುಣನ ಆರ್ಭಟ
ಕೋಲಾರ ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗುತ್ತಿದೆ. ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಆನೆ ಕಲ್ಲಿನ ಮಳೆ ಸುರಿದಿದ್ದು, ಇದರಿಂದ ಜನರು ಅಪಾಯಕ್ಕೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಕೋಲಾರ ಜಿಲ್ಲೆಯಲ್ಲಿ ಮಾತ್ರ ಮಳೆಯಾಗಿಲ್ಲ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭೀಕರವಾಗಿ ಮಳೆಯಾಗುತ್ತಿದ್ದು, ಇದರಿಂದ ರೈತರು ಬೆಳೆದ ಬೆಳೆಗೆ ಹೆಚ್ಚು ಪ್ರಮಾಣದ ಹಾನಿ ಉಂಟಾಗಿದೆ.
ವರುಣ ಸ್ವಲ್ಪ ಗುಡುಗಿ ಮರೆಯಾಗಿ ಹೋದನು
ಬೆಂಗಳೂರಿನಲ್ಲಿಯೂ ಸಹ ವರುಣ ಸ್ವಲ್ಪ ಗುಡುಗಿ ಮರೆಯಾಗಿ ಹೋದನು. ಹವಮಾನದಲ್ಲಿ ಬದಲಾವಣೆಯಾಗಿದೆ. ಚಿತ್ರದುರ್ಗ ಹಾಗೂ ಮಡಿಕೇರಿಯಲ್ಲಿ ವರುಣನ ಅಟ್ಟಹಾಸ ಮುಂದುವರೆದಿದೆ. ರಸ್ತೆ, ಮನೆಗಳಲ್ಲಿ ನೀರು ನುಗ್ಗಿದ್ದು, ದಿಕ್ಕು ತೋಚದೇ ಜನರು ಪರದಾಡುತ್ತಿದ್ದಾರೆ. ಚಿಕ್ಕಮಗಳೂರು, ಯಾದಗಿರಿಗೂ ಮಳೆ ವಿಪರೀತವಾಗಿ ಕಾಟ ಕೊಡುತ್ತಿದೆ.
ಸೊರ್ಸ್: ಟಿವಿ 9 ನ್ಯೂಸ್ ಚಾನೆಲ್
ಬರಹ: ಶ್ರೀ ಹರ್ಷ