
ಬೆಂಗಳೂರಿನಲ್ಲಿ ಕೊರೊನಾ ಭೀತಿ....
ಬೆಂಗಳೂರಿನ ಐಟಿ-ಬಿಟಿ ಕ್ಷೇತ್ರಕ್ಕೂ ಕೊರೊನಾ ಭೀತಿ ತಟ್ಟಿದ ಹಿನ್ನಲೆಯಲ್ಲಿ ಉದ್ಯೋಗಿಗಳಿಗೆ 14 ದಿನ ವೇತನ ಸಹಿತ ರಜೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಇಕೋ ಸ್ಪೇಸ್,ಐಟಿಪಿಎಲ್, ಮಾನ್ಯತಾ ಟೆಕ್ ಪಾರ್ಕ್ ಎಲ್ಲಾ ಟೆಕ್ ಪಾರ್ಕ್ ಗಳ ಅಭಿಪ್ರಾಯ ಸಂಗ್ರಹಿಸಿ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ಐಟಿ ಕಂಪೆನಿಗಳಿಂದ ಈ ಬಗ್ಗೆ ಈಗಾಗಲೇ 1 ಸುತ್ತಿನ ಚರ್ಚೆ ನಡೆಸಿದೆ.
ಐಟಿ ಕಂಪೆನಿಗಳು ಉದ್ಯೋಗಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದು,ಉದ್ಯೋಗಗಳ ವಿದೇಶ ಪ್ರಯಣಕ್ಕೂ ಕಂಪನಿಗಳಿಂದ ಬ್ರೇಕ್ ಹಾಕಲಾಗಿದೆ ಎನ್ನಲಾಗಿದೆ.