.jpeg)
ಸ್ಮಾರ್ಟ್ ಫೋನ್ ಮಾರಾಟಕ್ಕೆ ಹೊಡೆತ ನೀಡಿದ ಕೊರೊನಾ ವೈರಸ್...
ಕೊರೊನಾ ವೈರಸ್ ಸೃಷ್ಟಿಸಿರುವ ಭೀತಿಗೆ ಇಡಿ ವಿಶ್ವದಲ್ಲೇ ಆರ್ಥಿಕ ಪರಿಸ್ಥಿತಿ ಹದಗೆಟ್ಟೀದೆ. ಭಾರತ ಕೂಡ ಇದಕ್ಕೆ ಹೊರತಾಗಿಲ್ಲ. ಈಗಾಗಲೇ ಭಾರತದ ಷೆರುಪೇಟೆ, ಪ್ರವಾಸೋದ್ಯಮ ವಾಯುಯಾನ ಕ್ಷೇತ್ರಗಳು ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿದ್ದು, ಮೊಬೈಲ್ ಮಾರುಕಟ್ಟೆ ಈ ಪಟ್ಟಿಗೆ ಹೊಸ ಸೇರ್ಪಡೆ.
ಹೌದು, ಕೊರೊನಾ ವೈರಸ್ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಮೊಬೈಲ್ ಗಳ ಕುರಿತು ಮಾಹಿತಿ ನೀಡುವ ಫೋನ್ ಕರಿ ಸಂಸ್ಥೆ ಹೇಳಿದೆ.
ಇತ್ತೀಚಿಗೆ ಫೋನ್ ಕರಿ ಸಂಸ್ಥೆ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆ ಕುರಿತು ಅಂಕಿ ಅಂಶಗಳನ್ನು ನೀಡಿದ್ದು, ಕೊರೊನಾ ವೈರಸ್ ಪರಿಣಾಮದಿಂದಾಗಿ ಕಳೆದೆರಡು ತಿಂಗಳಿನಲ್ಲಿ ಸ್ಮಾರ್ಟ್ ಫೋನ್ ಗಳ ಮಾರಾಟ ಗಣನೀಯವಾಗಿ ಕುಸಿದಿದೆ ಎಂದು ತಿಳಿಸಲಾಗಿದೆ.