
ದೆಹಲಿಯ ಮುಖ್ಯಮಂತ್ರಿ ಮಗಳಿಗೆ ಪಂಗನಾಮ
ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಗಳು ಹರ್ಷಿತ ಕೇಜ್ರಿವಾಲ್ ಮೋಸದ ಜಾಲಕ್ಕೆ ಒಳಗಾಗಿದ್ದಾರೆ. ಸರಕು ಮರಾಟ ಮಾಡುವ ವೈಬ್ ಸೈಟ್ ನಲ್ಲಿ ಅವರ ಸೆಕೆಂಡ್ ಹ್ಯಾಂಡ್ ಸೋಫಾ ಸೆಟ್ಟನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಈ ಕ್ಯೂಆರ್ ಕೋಡ್ ಜಾಲಕ್ಕೆ ಒಳಗಾಗಿದ್ದಾರೆ.
ಹರ್ಷಿತ ಕೇಜ್ರಿವಾಲ್ ಸೋಫಾ ಸೆಟ್ ಮಾರಾಟ ಇಟ್ಟಾಗ ವಂಚಕ ಸೋಫಾ ಸೆಟ್ ಖರಿದಿ ಮಾಡುವಹಾಗೆ ಹೆಚ್ಚು ಆಸಕ್ತಿ ತೋರಿದ್ದಾನೆ ಇದನ್ನು ನಂಬಿದ ಹರ್ಷಿತಾ ಅವನು ಕೇಳಿದ ಎಲ್ಲಾ ಮಾಹಿತಿಯನ್ನು ಕೊಟ್ಟಿದ್ದಾರೆ ಮೇಲಾಗಿ ಕ್ಯೂಆರ್ ಕೋಡ್ ಸಹಿತ ಕೊಟ್ಟಿದ್ದಾರೆ ಇದರಿಂದ 34000. ರೂ.ಗಳನ್ನು ಅವರ ಬ್ಯಾಂಕ್ ಖಾತೆಯಿಂದ ಕಳೆದುಕೊಂಡಿದ್ದಾರೆ. ಈ ಸಂಬಂಧ ದೆಹಲಿಯ ಸಿವಿಲ್ ಲೈನ್ಸ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ವರದಿ: ಬಸವರಾಜ್ ಹೂಗಾರ್