
ದೇವರ ನಾಡಲ್ಲೊಂದು ಅಮಾನವೀಯ ಕೃತ್ಯ : ಗರ್ಭಿಣಿ ಆನೆಗೆ ಸ್ಫೋಟಕ ತುಂಬಿಸಿದ್ದ ಪೈನಾಪಲ್ ತಿನ್ನಿಸಿ ಸಾಯಿಸಿದ ದುರುಳರು....
ದೇವರ ನಾಡು , ಅಕ್ಷರಸ್ಥರ ರಾಜ್ಯ ಎಂದೇ ಕರೆಸಿಕೊಳ್ಳುವ ಕೇರಳ ರಾಜ್ಯದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಕೇರಳದ ಕೆಲವು ಸ್ಥಳೀಯರು ಗರ್ಭಿಣಿ ಆನೆಗೆ ಸ್ಫೋಟಕ ತುಂಬಿಸಿದ್ದ ಅನಾನಸ್ ತಿನಿಸಿದ್ದು ಅದು ಆನೆಯ ಬಾಯಲ್ಲಿ ಸ್ಫೋಟಗೊಂಡಿದೆ.
ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಆನೆ ಹಲವು ದಿನಗಳ ಕಾಲ ನದಿಯೊಂದರಲ್ಲಿ ನರಳುತ್ತ ನಿಂತಿತ್ತು. ಕೊನೆಗೆ ಮೇ 27 ರಂದು ಆನೆ ಮೃತಪಟ್ಟೀದೆ ಎಂದು ಕೇರಳದ ಸೈಲೆಂಟ್ ವ್ಯಾಲಿ ನ್ಯಾಷನಲ್ ಪಾರ್ಕ್ ನ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಸದ್ಯ ಈ ಘಟನೆಗೆ ಸಾಮಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿದ್ದರೂ ಮಾನವೀಯತೆ ಮಾತ್ರ ಕಾಣೆಯಾಗಿದೆ ಎಂದು ನೆಟ್ಟೀಗರು ಟ್ವಿಟ್ ಮಾಡುತ್ತಿದ್ದಾರೆ. ಈ ರಾಕ್ಷಸಿ ಕೃತ್ಯವನ್ನು ಎಸುಗಿದ ತಕ್ಕ ಶಿಕ್ಷೆಯಾಗಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.