
ಕ್ಷುಲ್ಲಕ ಕಾರಣಕ್ಕೆ ಮನೆಯವರಿಂದಲೆ ಯುವಕನ ಕೊಲೆ!!
ಮೂಡುಬಿದಿರೆ:-ಕ್ಷುಲಕ ಕಾರಣಕ್ಕೆ ತಮ್ಮನಿಗೆ ಅಣ್ಣ ಹಾಗೂ ಭಾವ ಸೇರಿಕೊಂಡು ದೈಹಿಕ ಹಿಂಸೆ ನೀಡಿ ಕೊಲೆ ಮಾಡಿರುವ ಘಟನೆಯು ಕೆಲ್ಲಪುತ್ತಿಗೆಯಲ್ಲಿ ನೆಡೆದಿದೆ.
ಮೃತ ವ್ಯಕ್ತಿಯನ್ನು ಸಿದ್ದು ಅವರ ಪುತ್ರ ರವೀಂದ್ರ ಎಂದು ಗುರುತಿಸಲಾಗಿದೆ. ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ ಕ್ಷುಲ್ಲಕ ಕಾರಣಕ್ಕೆ ಜಗಳ ನೆಡೆದಿದ್ದು ಅಣ್ಣ ತಮ್ಮನ ಹೊಟ್ಟೆಯ ಭಾಗಕ್ಕೆ ಕಾಲಿನಿಂದ ಹೊದ್ದಿದ್ದರಿಂದ ಹೊಟ್ಟೆಯ ಒಳ ಭಾಗಕ್ಕೆ ತೀರ್ವ ಪೆಟ್ಟಾಗಿದ್ದರಿಂದ ರಕ್ತದ ವಾಂತಿ ಮಾಡಿಕೊಂಡಿದ್ದಾನೆ ಕೂಡಲೇ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಆರೋಪಿಗಳಾದ ಶ್ರೀನಿವಾಸ ಹಾಗೂ ಆನಂದ ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನೆಡೆಸುತ್ತಿದ್ದಾರೆ.