
ಉತ್ತರಾಧಿಕಾರಕ್ಕೆ ಜಟಾಪಟಿ: ಸತ್ಯ ದರ್ಶನಕ್ಕೆ ಸಜ್ಜಾದ ಮೂರು ಸಾವಿರ ಮಠ
ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿಚಾರ ಸದ್ದು ಮಾಡ್ತಾ ಇದೆ. ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ತಾನೇ ಉತ್ತರಾಧಿಕಾರಿ ಎಂದು ಹೇಳಿದ್ದಾರೆ. ಈ ಕುರಿತು ದಾಖಲೆಗಳ ಸಹಿತ ಸಾಬೀತು ಪಡಿಸುವುದಾಗಿ ಘೋಷಿಸಿದ್ದಾರೆ. ಮಠದ ಆವರಣದಲ್ಲಿ ನಾಳೆ ಸತ್ಯದರ್ಶನ ಹೆಸರಲ್ಲಿ ಭಕ್ತರ ಸಭೆ ಕರೆದಿದ್ದಾರೆ.
ಬೆಳಗ್ಗೆ ಹುಬ್ಬಳ್ಳಿಯ ನೆಹರು ಮೈದಾನದಿಂದ ಮೂರು ಸಾವಿರ ಮಠದವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಮೂರು ಸಾವಿರ ಮಠಕ್ಕೆ ತೆರಳಿ ಕರ್ತೃ ಗದ್ದುಗೆಯ ಸಮ್ಮುಖದಲ್ಲಿ ಬಹಿರಂಗ ಸತ್ಯದರ್ಶನ ಸಭೆ ನಡೆಸಲಾಗುವುದು ಎಂದು ದಿಂಗಾಲೇಶ್ವರರು ಸ್ಪಷ್ಟಪಡಿಸಿದ್ದಾರೆ