.jpeg)
ಜೆಎನ್ ಯು ಗಲಭೆ : ಹೊಣೆ ಹೊತ್ತಿಕೊಂಡ ಹಿಂದೂ ರಕ್ಷಾ ದಳ.
ನವದೆಹಲಿ : ನವದೆಹಲಿಯ ಜವಾಹರ್ ನೆಹರು ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆದ ಗಲಭೆಯ ಹೊಣೆಯನ್ನು ಹಿಂದೂ ರಕ್ಷಾ ದಳ ಎಂಬ ಸಂಘಟನೆ ಹೊತ್ತಿಕೊಂಡಿದೆ.
ಹಿಂದೂ ರಕ್ಷಾ ದಳ ಸಂಘಟನೆಯ ಮುಖ್ಯಸ್ಥ ಎಂದು ಹೇಳಿಕೊಂಡಿರುವ ಪಿಂಕಿ ಚೌಧರಿ ಎನ್ನುವ ವ್ಯಕ್ತಿ ಘಲಭೆಯ ಜವಾಬ್ದಾರಿ ಹೊತ್ತಿದ್ದಾನೆ. ಇನ್ನು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿರುವ ಈತ ಜೆಎನ್ ಯು ಹಲವು ವರ್ಷಗಳಿಂದ ಕಮ್ಯುನಿಷ್ಟರ ಭದ್ರ ಕೋಟೆಯಾಗಿದೆ. ಇದನ್ನು ನಾವು
ಸಹಿಸುವುದಿಲ್ಲ. ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಹೀಗೆಯೇ ಎದುರಿಸಲಾಗುತ್ತದೆ ಎಂದು ಹೇಳಿದ್ದಾನೆ.
ಇನ್ನು ದೆಹಲಿಯ ಪೋಲಿಸರು ಪಿಂಕಿ ಚೌಧರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ.
ಇನ್ನು ಕಳೆದ ಭಾನುವಾರ ರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡ 20ಕ್ಕೂ ಅಧಿಕ ಜನರು ಜೆಎನ್‌ಯು ಆವರಣಕ್ಕೆ ನುಗ್ಗಿ, ಹಲವು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಪಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು.