
ಕೊಪ್ಪಳದ ಗವಿಮಠದಿಂದ ಜಾತ್ರಾ ವಿಶೇಷ ಮಹಾ ದಾಸೋಹ....
ಕೊಪ್ಪಳ ಶ್ರೀ ಗವಿಮಠ ಜಾತ್ರಾ ಮಹಾ ದಾಸೋಹದಲ್ಲಿ ಇಂದು 18 ಲಕ್ಷಕ್ಕಿಂತ ಹೆಚ್ಚು ಬಿಸಿ ಬಿಸಿ ಮಿರ್ಜಿಗಳು... ಎರಡನೇ ದಿನ ಲಕ್ಷ-ಲಕ್ಷ ಭಕ್ತರಿಗೆ ಉತ್ತರ ಕರ್ನಾಟಕ ಭಾಗದ ಶೈಲಿಯ ರೋಟಿ, ಚಪಾತಿ,ಪಲ್ಲೆ,ಮಾದಲಿ, ಹಾಲು,ತುಪ್ಪ,ಅನ್ನಾ, ಸಾಂಬಾರ್, ಚಟ್ನಿಪುಡಿ, ಮಜ್ಜಿಗೆ ಇವುಗಳ ಜೊತೆಗೆ ಬಿಸಿ ಬಿಸಿಯಾದ ಮಿರ್ಜಿಯನ್ನು ವಿತರಿಸಲಾಯಿತು.ಕಳೆದ ೫ ವರ್ಷಗಳಿಂದಲೂ ಮಹಾದಾಸೋಹದಲ್ಲಿ ಮಿರ್ಜಿಗಳನ್ನು ನೀಡಲಾಗುತ್ತಿದೆ.ಮೊದಲಿಗೆ ಕೊಪ್ಪಳದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಗೆಳೆಯರ ಬಳಗವು ಈ ಸೇವೆಗೈಯುತ್ತಿತ್ತು.ಈ ಸಲ ಗವಿಮಠವೇ ವಹಿಸೀಕೊಂಡಿದೆ.
18 ಕ್ವಿಂಟಾಲ್ ಕಡ್ಲಿಬೇಳೆ ಹಿಟ್ಟು,15ಕ್ವಿಂಟಾಲ್ ಹಸಿಮೆಣಸಿನಕಾಯಿ,10 ಬ್ಯಾರಲ್ ಎಣ್ಣೆ ಅಲ್ಲಿದೆ ಜಿರಗಿ, ಅಡಿಗೆ ಸೋಡಾ ಇನ್ನಿತರ ವಸ್ತುಗಳನ್ನು ಬಳಸಿಕೂಂಡು ಮುಂಜಾನೆಯಿಂದ 300ಕ್ಕಿಂತಲೂ ಹೆಚ್ಚು ಜನ ಬಾಣಸಿಗರು, ಸ್ವಯಂಸೇವಕರು ಬಿಸಿ ಬಿಸಿ ಮಿರ್ಚಿಗಳನ್ನು ತಯಾರಿಸುವಂತಹ ಹಾಗೂ ವಿತರಿಸುವಂತಹ ಕೆಲಸದಲ್ಲಿ ಬೆಳಗಿನಿಂದ ರಾತ್ರಿಯವರೆಗೆ ನಿರತರಾಗಿದ್ದಾರೆ.ಇಂದು ಭಕ್ತರಿಗೆ 18 ಲಕ್ಷಕ್ಕಿಂತ ಹೆಚ್ಚೂ ಮಿರ್ಚಿಗಳು
ತಯಾರಾಗುತ್ತಿವೆ. ಭಕ್ತರಿಗೆ ಪ್ರಸಾದಲ್ಲಿ ಮಿರ್ಚಿಗಳನ್ನು ಒದಗಿಸುವ ಸಂಕಲ್ಪವನ್ನು ಪೂಜ್ಯರು ಮಾಡಿದ್ದರಿಂದ ಪ್ರತಿವರ್ಷ ಮಹಾದಾಸೋಹದಲ್ಲಿ ಭಕ್ತರಿಗೆ ಮಿರ್ಚಿಗಳನ್ನು ನೀಡಲಾಗುತ್ತಿದೆ.
ವರದಿ: ಶರಣಪ್ಪ ಕುಂಬಾರ ತಾವರಗೇರಾ