
'ಮಾಸ್ಟರ್ ಪೀಸ್' ಖ್ಯಾತಿಯ ನಿರ್ದೇಶಕ ಮಂಜು ಮಾಂಡವ್ಯ ನಟನಾಗಿ ಬಡ್ತಿ..!
ಸ್ಯಾಂಡಲ್ವುಡ್ನಲ್ಲಿ ನಿರ್ದೇಶಕರು ನಾಯಕರಾಗೋದು ನಾಯಕರು ನಿರ್ದೇಶಕರಾಗೋದು ಈಗ ಕಾಮನ್ ಆಗಿ ಹೋಗಿದೆ. ಇಂತಹವರ ಸಾಲಿಗೆ 'ಮಾಸ್ಟರ್ ಪೀಸ್' ಖ್ಯಾತಿಯ ನಿರ್ದೇಶಕ ಮಂಜು ಮಾಂಡವ್ಯ ಸಹ ಸೇರಿಕೊಂಡಿದ್ದಾರೆ.
ಹೌದು ಯಶ್ ಅಭಿನಯದ ಹಿಟ್ ಸಿನಿಮಾ 'ಮಾಸ್ಟರ್ ಪೀಸ್' ನಿರ್ದೇಶನ ಮಾಡಿದ್ದ ಮಂಜು ಅವರು ಈಗ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಭರತನ ಅವತಾರದಲ್ಲಿ ಆ್ಯಕ್ಷನ್ ಹಾಗೂ ಹಾಸದ್ಯದ ಔತಣ ನೀಡಲು ಸಜ್ಜಾಗಿದ್ದಾರೆ
ಸ್ಯಾಂಡಲ್ವುಡ್ನಲ್ಲಿ 'ಶ್ರೀ ಭರತ ಬಾಹುಬಲಿ' ಎನ್ನುವ ಸಿನಿಮಾ ಸಿದ್ಧವಾಗುತ್ತಿದ್ದು, ಇದರಲ್ಲಿ ಭರತನಾಗಿ ಮಂಜು ಹಾಗೂ ಬಾಹುಬಲಿಯಾಗಿ ಕಾಮಿಡಿ ಕಿಂಗ್ ಚಿಕ್ಕಣ್ಣ ಕಾಣಿಸಿಕೊಳ್ಳಲಿದ್ದಾರೆ.ಈ ಈ ಚಿತ್ರದಲ್ಲಿ ಚರಣ್ ರಾಜ್ ಅವರ ಮಗ ತೇಜು ಚರಣ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಕಾಮಿಡಿಯಿಂದಲೇ ಕಿಕ್ ಕೊಡುವ ಚಿಕ್ಕಣ್ಣ ಸಹ ಈ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಮಂಜು ಮಾಂಡವ್ಯ ಅವರೇ ಈ ಸಿನಿಮಾಗೆ ಕತೆ ಬರೆದು ನಿರ್ದೇಶನ ಸಹ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕಾಮಿಡಿ, ಲವ್ ಸ್ಟೋರಿ, ಹಾಸ್ಯ ಎಲ್ಲವೂ ಇದೆ.