.jpeg)
ನಮೋ ಸ್ವಾಗತಕ್ಕೆ ಸಜ್ಜಾದ ಜೆಕೆವಿಕೆ
ಬೆಂಗಳೂರು:ಎರಡು ದಿನಗಳ ಕಾಲ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ಮೋದಿ ಅವರು ಗುರುವಾರ ತುಮಕೂರಿನಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ರೈತ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅದರಂತೆ ಇಂದು ಕೂಡ ಜಿಕೆವಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆ ನಂತರ ದೆಹಲಿಗೆ ಹಿಂದಿರುಗಲಿದ್ದಾರೆ.
ಇಂದು ಬೆಳಗ್ಗೆ 9.40ಕ್ಕೆ ಪ್ರಧಾನಿ ಮೋದಿ ಅವರು ರಾಜಭವನದಿಂದ ಹೆಬ್ಬಾಳದಲ್ಲಿರುವ ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆಗೆ ತೆರಳಲಿದ್ದಾರೆ. ಬಳಿಕ 107ನೇ ಇಂಡಿಯನ್ ಸೈನ್ಸ್ ಕಾರ್ಯಕ್ರಮ ಉದ್ಘಾಟಿಸಿ, ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದ ಬಳಿಕ ಬೆಳಗ್ಗೆ 11.10ಕ್ಕೆ ರಸ್ತೆ ಮೂಲಕ ಯಲಹಂಕ ವಾಯುಸೇನೆ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ 11.25ಕ್ಕೆ ದೆಹಲಿಗೆ ತೆರಳಲಿದ್ದಾರೆ. ಅಲ್ಲಿಗೆ ಪ್ರಧಾನಿ ಮೋದಿ ಅವರ ಎರಡು ದಿನಗಳ ಪ್ರವಾಸ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಪ್ರಧಾನಿ ಅವರೊಂದಿಗೆ ಆರಂಭದಿಂದ ಜೊತೆಯಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಬೀಳ್ಕೊಡುಗೆ ನೀಡುವವರೆಗೂ ಇರಲಿದ್ದಾರೆ.