
ಕೆವೈಸಿʼಗಾಗಿ ಇನ್ಮುಂದೆ ಬ್ಯಾಂಕ್ ಗೆ ಹೋಗ್ಬೇಕಾಗಿಲ್ಲ.!!!
ಕೆವೈಸಿʼಗಾಗಿ ಇನ್ಮುಂದೆ ಬ್ಯಾಂಕ್ ಗೆ ಹೋಗ್ಬೇಕಾಗಿಲ್ಲ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾಸ್ಟರ್ ಕೆವೈಸಿ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಕೆವೈಸಿ ಪ್ರಕ್ರಿಯೆಯು ಈಗ ಮೊಬೈಲ್ ವೀಡಿಯೊ ಸಂಭಾಷಣೆಗಳನ್ನು ಆಧರಿಸಿರಲಿದೆ. ಕೇಂದ್ರೀಯ ಬ್ಯಾಂಕ್, ಬ್ಯಾಂಕೇತರ ಹಣಕಾಸು ಕಂಪನಿಗಳು, ವ್ಯಾಲೆಟ್ ಸೇವಾ ಪೂರೈಕೆದಾರರು ಮತ್ತು ಇತರ ಹಣಕಾಸು ಸೇವಾ ಕಂಪನಿಗಳಿಗೆ ಇದ್ರಿಂದ ನೆಮ್ಮದಿ ಸಿಕ್ಕಿದೆ.
ದೂರದ ಪ್ರದೇಶಗಳಲ್ಲಿ ವಾಸಿಸುವ ಗ್ರಾಹಕರಿಗೆ ಈಗ ಕೆವೈಸಿ ಮಾಡಿಸುವುದು ಸುಲಭವಾಗಲಿದೆ. ವೆಚ್ಚಗಳು ಸಹ ಕಡಿಮೆಯಾಗಲಿದೆ. ಕೆವೈಸಿ ನಿಯಮಗಳನ್ನು ತಿದ್ದುಪಡಿ ಮಾಡುವ ಆರ್‌ಬಿಐ ಅಧಿಸೂಚನೆಯ ಪ್ರಕಾರ, ಗ್ರಾಹಕರನ್ನು ಸುಲಭವಾಗಿ ಗುರುತಿಸಲು, ಗ್ರಾಹಕರ ಅನುಮತಿ ಆಧಾರಿತ ಪರ್ಯಾಯ ಕಾರ್ಯವಿಧಾನವಾಗಿ ವಿಡಿಯೋ ಆಧಾರಿತ ಗ್ರಾಹಕ ಗುರುತಿನ ಪ್ರಕ್ರಿಯೆಯನ್ನು ಪರಿಚಯಿಸಿದೆ.
ದೂರದ ಪ್ರದೇಶಗಳಲ್ಲಿರುವ ಗ್ರಾಹಕರನ್ನು ಹಣಕಾಸು ಸಂಸ್ಥೆಗಳ ಅಧಿಕಾರಿಗಳು ಪ್ಯಾನ್ ಅಥವಾ ಆಧಾರ್ ಕಾರ್ಡ್ ಮತ್ತು ಕೆಲವು ಪ್ರಶ್ನೆಗಳ ಮೂಲಕ ದಾಖಲೆಗಳ ಪರಿಶೀಲನೆ ನಡೆಸುತ್ತಾರೆ. ಗ್ರಾಹಕರು ದೇಶದಲ್ಲಿದ್ದಾರೆ ಎಂಬುದನ್ನು ಏಜೆಂಟರ್ ಖಚಿತಪಡಿಸಿಕೊಳ್ಳಬೇಕು.