
ಮೋದಿ-ಶಾಗೆ ಕೊಲೆ ಬೆದರಿಕೆ ಹಾಕಿದ್ದ ಯುವಕ ಅಂದರ್..!
ಮಂಗಳೂರು:- ವಿದೇಶದಲ್ಲಿದ್ದುಕೊಂಡು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ವಿಟ್ಲ ಪೊಲೀಸರು ಯುವಕನೊಬ್ಬನನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ಬಂಟ್ವಾಳದ ಪೆರುವಾಯಿ ಗ್ರಾಮದ ಸೇನೆರಪಾಲು ನಿವಾಸಿ ಅದ್ರಾಮ ಅವರ ಪುತ್ರ ಅನ್ವರ್ ಪೊಲೀಸರ ವಶದಲ್ಲಿರುವ ಆರೋಪಿ. ಈತ ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದು ಅಲ್ಲಿದ್ದುಕೊಂಡೇ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೋಮುಭಾವನೆ ಕೆರಳಿಸುವ ಪ್ರಚೋದನಾತ್ಮಕ ಸಂದೇಶಗಳನ್ನು ಕಳುಹಿಸುತ್ತಿದ್ದ.
ಈತ ಕಳುಹಿಸಿದ್ದ ಸಂದೇಶಗಳು ಸಾಕಷ್ಟು ವ್ಯಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡಿತ್ತು. ಇತ್ತೀಚೆಗಷ್ಟೇ ಈತ ತವರೂರಿಗೆ ಆಗಮಿಸಿದ್ದ. ಅನ್ವರ್ ವಿರುದ್ಧ ಕೋಮುದ್ವೇಷ ಬೆಳೆಸುವ ಸಂದೇಶ ಹರಡಿದ ಆರೋಪದ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.