
ಪಾಕಿಸ್ತಾನದ ಕರಾಚಿಯಲ್ಲಿ ವಿಮಾನ ಪತನ....ಲಾಹೋರ್ ನಿಂದ ಕರಾಚಿಗೆ ಹೊರಟಿದ್ದ ಪಾಕಿಸ್ತಾನದ A320 ವಿಮಾನ.....
ಕರಾಚಿ : 90 ಜನ ಪ್ರಯಾಣಿಕರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಸಂಚರಿಸುತ್ತಿದ್ದ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಜನವಸತಿ ಪ್ರದೇಶವೊಂದರಲ್ಲಿ ನೆಲಕ್ಕಪ್ಪಳಿಸಿದೆ.
ಲಾಹೋರ್ ನಿಂದ ಟೇಕ್ ಆಫ್ ಆಗಿದ್ದ ವಿಮಾನ ಕರಾಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಗೂ ಕೆಲವೇ ಕ್ಷಣಗಳ ಮುಂಚೆ ಪತನಗೊಂಡಿದೆ. ವಿಮಾನ ಪತನವಾಗಿರುವುದನ್ನು ಪಾಕಿಸ್ತಾನ ಏರ್ ಲೈನ್ಸ್ ಖಚಿತಪಡಿಸಿದೆ.
ಸದ್ಯ ವಿಮಾನ ಪತನವಾದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು ಇನ್ನು ಸಾವು ನೋವಿನ ಪ್ರಮಾಣ ತಿಳಿದುಬರಬೇಕಿದೆ. ಮೇಲ್ನೋಟಕ್ಕೆವಿಮಾನ ಪತನಕ್ಕೆ ಲ್ಯಾಂಡಿಂಗ್ ಗಿಯರ್ ಫೇಲ್ ಆಗಿದ್ದೆ ಕಾರಣ ಎಂದು ಹೇಳಲಾಗುತ್ತಿದೆಯಾದರೂ ತನಿಖೆ ಬಳಿಕ ಸ್ಪಷ್ಟ ಕಾರಣ ಗೊತ್ತಾಗಲಿದೆ.