
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೇಮ್ಸ್ ಚಿತ್ರದ ಅದ್ದೂರಿ ಮೂಹೂರ್ತ....
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಹುನಿರೀಕ್ಷಿತ ಜೇಮ್ಸ್ ಚಿತ್ರದ ಮುಹೂರ್ತ ಇಂದು ನಗರದ ಬಾಲಾಂಜನೆಯ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ಇನ್ನು
ಪುನೀತ್ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಸೇರಿದ್ದರು.
ಬಹದ್ದೂರ್ ಚೇತನ್ ಅವರ ನಿರ್ದೇಶನದ ಹಾಗೂ ಪುನೀತ್ ರಾಜಕುಮಾರ್ ಅವರ ನಟನೆಯ ಅಪರೂಪದ ಕಾಂಬಿನೇಷನ ಚಿತ್ರ ಇದಾಗಿದ್ದು, ಈಗಾಗಲೇ ಪುನೀತ್ ರ ಸ್ಟೈಲಿಶ್ ಲುಕ್ ನ ಪೋಸ್ಟರ್ ಗಳು ಅಭಿಮಾನಿಗಳಲ್ಲಿ ಚಿತ್ರದ ಕುರಿತು ಕುತೂಹಲ ಹುಟ್ಟು ಹಾಕಿದೆ.
ಇನ್ನು ಮಾದ್ಯಮದೊಂದಿಗೆ ಮಾತನಾಡಿದ ಚಿತ್ರ ತಂಡ ಆದಷ್ಟು ಶೀಘ್ರದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದರು .
ಚಿತ್ರಕಥೆ ವಿಭಿನ್ನವಾಗಿದ್ದು ,ಆಕ್ಷನ್, ಕಾಮಿಡಿ, ಸೆಂಟಿಮೆಂಟ್ ಸೇರಿದಂತೆ ಎಲ್ಲಾ ಕಮರ್ಶಿಯಲ್ ಎಲಿಮೆಂಟ್ ಗಳು ಚಿತ್ರದಲ್ಲಿರಲಿವೆ ಎಂದು ಪುನಿತ್ ರಾಜ್ ಕುಮಾರ್ ಮಾದ್ಯಮದೊಂದಿದೆ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.
ಇನ್ನು ಚಿತ್ರಕ್ಕೆ ಕಿಶೋರ್ ಪಥಿಗೊಂಡು ಬಂಡವಾಳ ಹಾಕಿದ್ದು, ಚೇತನ ರಾಜ್ ಸಂಗೀತ ನಿರ್ದೇಶನ ಮಾಡಲಿದ್ದಾರೆ.