
ರೈಲು ಅಪಘಾತದಲ್ಲಿ ವ್ಯಕ್ತಿಯೋರ್ವನ ಸಾವು
ಮಂಗಳೂರು: ನಗರದ ಹೊರ ವಲಯದಲ್ಲಿರುವ ತೊಕ್ಕೊಟ್ಟಿನ ಕಾಪಿಕಾಡ್ ಬಳಿ ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ಕಾಪಿಕಾಡು ನಿವಾಸಿ ರತನ್ ಕುಮಾರ್(40) ಎಂದು ಗುರುತಿಸಲಾಗಿದೆ. ಇವರು ಬಸ್ ಕಂಡಕ್ಟರ್ ಆಗಿದ್ದರು.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.