1.jpg)
ಡೆಮೋ ಪೀಸ್ ಮೂವಿಯಲ್ಲಿ ಸೋನಾಲ್ ಕಮಾಲ್..!
ವಿವೇಕ್ ನಿರ್ದೇಶನದಲ್ಲಿ ಮೂಡಿಬಂದಿರುವ "ಡೆಮೋ ಪೀಸ್" ಸಿನಿಮಾದಲ್ಲಿ ಸೋನಾಲ್
ಮಂಥರೋ ನಾಯಕಿಯಾಗಿ ಪಾತ್ರವಹಿಸುತ್ತಿದ್ದಾರೆ.
ಈ ಸಿನಿಮಾದಲ್ಲಿ ಅವರು ಕಾಲೇಜ್ ವಿದ್ಯಾರ್ಥಿನಿಯಾಗಿ ನಟಿಸುತ್ತಿದ್ದಾರೆ. ಶೂಟಿಂಗ್ ವೇಳೆ ತಮ್ಮ ಕಾಲೇಜ್ ದಿನಗಳ ನೆನಪಿಗೆ ಜಾರಿದ್ದಾರಂತೆ ಸೋನಾಲ್. ಕಾಲೇಜ್ ಹುಡುಗಿಯರ ಜೀವನವನ್ನು ಹಲವು ದೃಶ್ಯಗಳಲ್ಲಿ ತೋರಿಸುವ ಪ್ರಯತ್ನ ಕೂಡ ಮಾಡಿದರಂತೆ, ಮತ್ತು ಕ್ಯೂಟ್ ಲವ್ ಸ್ಟೋರಿಯ ಜೊತೆಗೆ ಸಖತ್ ಮನರಂಜನೆ ನೀಡುವಂತಹ ಅಂಶಗಳು ಈ ಸಿನಿಮಾದಲ್ಲಿವೆಯಂತೆ ಈ ಚಿತ್ರಕ್ಕೆ ನಾಯಕರಾಗಿ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಭರತ್ ಬೋಪಣ್ಣ ಸೋನಾಲ್ಗೆ ಜೊತೆಯಾಗಿದ್ದಾರೆ.