
ಪ್ರೇಮ ವೈಫಲ್ಯ ಅಡುಗೆ ಭಟ್ಟ ನೇಣಿಗೆ ಶರಣು.
ಬೆಂಗಳೂರು,- ಪ್ರೇಮ ವೈಫಲ್ಯದಿಂದ ನೊಂದ ಅಡುಗೆಭಟ್ಟನೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ಬಂಡೇಪಾಳ್ಯದ ಎಂ.ಎನ್.ಪಾಳ್ಯದಲ್ಲಿ ನಡೆದಿದೆ. ಅಸ್ಸಾಂ ಮೂಲದ ಕೀನಂ ನಾಥ್ (25) ಆತ್ಮಹತ್ಯೆ ಮಾಡಿಕೊಂಡವರು. ಸ್ಥಳೀಯ ಹೋಟೆಲ್ ಒಂದರಲ್ಲಿ ಅಡುಗೆಭಟ್ಟನಾಗಿದ್ದ ಕೀನಂ ನಾಥ್ ಪ್ರೇಮ ವೈಫಲ್ಯದಿಂದ ನೊಂದು ನಿನ್ನೆ ರಾತ್ರಿ ಮನೆಯಲ್ಲಿ ಒಂಟಿಯಾಗಿದ್ದಾಗ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಸ್ಸಾಂನಿಂದ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಕೀನಂನಾಥ್ ಹಲವು ದಿನಗಳಿಂದ ಹೋಟೆಲ್ ಒಂದರಲ್ಲಿ ಅಡುಗೆಭಟ್ಟನಾಗಿ ಕೆಲಸ ಮಾಡಿಕೊಂಡಿದ್ದು ಇನ್ನು ಆತನಿಗೆ ವಿವಾಹವಾಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಬಂಡೇಪಾಳ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.