
ಧಾರಾವಾಹಿ ನೋಡುತ್ತಿರುವಾಗಲೇ ಸ್ಪೋಟಿಸಿದ ಟಿವಿ ಮಹಿಳೆ ಸಾವು.!!
ಒಡಿಶಾ:-ಶನಿವಾರ ಮನೆಯಲ್ಲಿ ಟೀವಿ ನೋಡುತ್ತ ಕುಳಿತಿದ್ದಾಗ ಟಿವಿ ಸ್ಪೋಟಗೊಂಡು ಮಹಿಳೆ ಮೃತಪಟ್ಟಿರುವ ಘಟನೆಯು ಒಡಿಶಾದ ಸುಂದರ್ ಗಢ ಜಿಲ್ಲೆಯ ಲಗಂಡಬುಡ ಗ್ರಾಮದಲ್ಲಿ ನೆಡೆದಿದೆ.
ಬಾಬಿ ನಾಯಕ ಮೃತಪಟ್ಟ ಮಹಿಳೆ,ಪತಿ ದಿಲೇಶ್ವರ್ ನಾಯಕ ಹಾಗೂ ಮಗುವಿಗೆ ಗಾಯಗಳಾಗಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉನ್ನತ ಮೂಲಗಳ ಪ್ರಕಾರ ಇದು ಶಾರ್ಟ್ ಸರ್ಕುಟ್ ನಿಂದ ಸಂಭವಿಸಿರಬಹುದು ಎಂದು ಅವರ ಅಕ್ಕ ಪಕ್ಕದ ಮನೆಯವರು ಹೇಳಿದ್ದಾರೆ.