
ಸಂಭ್ರಮದಿಂದ ನಡೆಯುತ್ತಿರುವ ಆನೆಗುಂದಿ ಉತ್ಸವ
ವೈಭವದ ಆನೆಗುಂದಿ ಉತ್ಸವದಲ್ಲಿ ಸಂಭ್ರಮ ಕಳೆಗಟ್ಟಿದೆ. ಈ ನಡುವೆ ನಾಡಿನ ಸಾಂಸ್ಕೃತಿಕ ಉತ್ಸವದಲ್ಲಿ ಅನೇಕ ಮಹಿಳೆಯರು ಕೂಡ ಪಾಲ್ಗೊಂಡಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಇವತ್ತು ನಡೆದ ಪೂಜೆ ಕುಣಿತದಲ್ಲಿ ವಿದೇಶಿ ಮಹಿಳೆಯೊಬ್ಬರು ಕುಣಿದು ಕುಪ್ಪಳಿಸಿದ್ರು. ಅಲ್ಲದೆ ಇವತ್ತು ಬೆಳಿಗ್ಗೆ ಗ್ರಾಮದ ದುರ್ಗಾದೇವಿ ದೇವಸ್ಥಾನದಿಂದ ಆನೆಗುಂದಿಯ ಗಗನ ಮಹಾಲ್ ನವರೆಗೂ ವಿವಿಧ ಕಲಾ ತಂಡವು ಭವ್ಯ ಮೆರವಣಿಗೆಯಲ್ಲಿ ಸಾಗಿ ಬಂದವು. ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದ್ದ ಈ ಮೆರವಣಿಗೆಯಲ್ಲಿ ಮಹಿಳೆಯರು ಡೊಳ್ಳು ಕುಣಿತ, ವೀರಗಾಸೆ, ಕರಡಿ ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ನೆರೆದಿರುವಾರರಿಗೆ ವಿಶೇಷ ಮುದ ನೀಡಿದವು.