
ದೇರಳಕಟ್ಟೆಯಲ್ಲಿ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಅಟೋ ಮೊಬೈಲ್ ಅಂಗಡಿಗೆ ಬೆಂಕಿ.!!
ಉಳ್ಳಾಲ: ಅಟೋ ಮೊಬೈಲ್ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ಮುಂಜಾನೆ ದೇರಳಕಟ್ಟೆಯಲ್ಲಿ ನಡೆದಿದೆ.
ದೇರಳಕಟ್ಟೆಯ ವಿದ್ಯಾರತ್ನ ಕ್ರಾಸ್ ಎಂಬಲ್ಲಿನ ಭಾರತ್ ಅಟೋ ಮೊಬೈಲ್ ಅಂಗಡಿಗೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಎರಡು ದಿನಗಳ ಹಿಂದಷ್ಟೇ ಪೌರತ್ವ ಪ್ರತಿಭಟನೆಗೆ ತರಲಾಗಿದ್ದ ಲಾರಿ ಹಾಗೂ ಅದರಲ್ಲಿದ್ದ ಕುರ್ಚಿಗಳಿಗೆ ಬೆಂಕಿ ಹಾಕಲಾಗಿತ್ತು. ಆ ಘಟನೆಯಲ್ಲಿ ಕುರ್ಚಿ ಸಹಿತ ಸಂಪೂರ್ಣ ಲಾರಿ ಸುಟ್ಟು ಕರಕಲಾಗಿತ್ತು.
ದುಷ್ಕರ್ಮಿಗಳು ಅಂಗಡಿಯ ಶಟರ್ ಬಾಗಿಲನ್ನು ಕಬ್ಬಿಣದ ರಾಡ್ ಮೂಲಕ ಮೇಲೆತ್ತಿ, ಒಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ, ಈ ಸ್ಥಳದಲ್ಲಿ ಗಸ್ತಿಗೆ ಬಂದ ಪೊಲೀಸರು ಅಂಗಡಿಯಲ್ಲಿ ಬೆಂಕಿ ಉರಿಯುವುದನ್ನು ಕಂಡು ಕೂಡಲೇ ಅಗ್ನಿ ಶಾಮಕದಳಕ್ಕೆ ಮಾಹಿತಿ ನೀಡಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಇದರಿಂದಾಗಿ ಉಂಟಾಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಹೋಗಿದೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.