
ಪಾಂಡೆ ಫೀಲ್ಡಿಂಗ್‌ಗೆ ದಂಗಾದ ಡೇವಿಡ್ ವಾರ್ನರ್, ಚೆಂಗನೆ ನೆಗೆದು ಕ್ಯಾಚ್ ಹಿಡಿದ ಕನ್ನಡಿಗ
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಭಾರತ ತಂಡದ ಡು ಆರ್ ಡೈಪಂದ್ಯದಲ್ಲಿ ಅದ್ಭುತ ಫೀಲ್ಡಿಂಗ್‌ನೊಂದಿಗೆ ಮಿಂಚಿದ ಕನ್ನಡಿಗ ಮನೀಶ್ ಪಾಂಡೆ, ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ವಾರ್ನರ್ ಕವರ್ಸ್ ಮೇಲೆ ಬೌಂಡರಿ ಹೊಡೆಯಲೆತ್ನಿಸಿದಾಗ ಪಾಂಡೆ ತಲೆ ಮೇಲೆ ಹಾರಿ ಹೋಗುತ್ತಿದ್ದ ಚೆಂಡನ್ನು ಚೆಂಗನೆ ನೆಗೆದು ಕ್ಯಾಚ್ ಹಿಡಿದು, 12 ಎಸೆತಗಳಲ್ಲಿ 15 ರನ್ ಗಳಿಸಿ ಮತ್ತೊಂದು ದೊಡ್ಡ ಇನಿಂಗ್ಸ್ ಆಡಲು ಎದುರು ನೋಡುತ್ತಿದ್ದ ವಾರ್ನರ್‌ಗೆ ಪೆವಿಲಿಯನ್ ದಾರಿ ತೋರಿದರು. ಪಾಂಡೆ ಅದ್ಭುತ ಕ್ಯಾಚ್ ಹಿಡಿದು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು.
ರಿಷಭ್ ಪಂತ್ ಅವರ ಸ್ಥಾನದಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿದ ಮನೀಶ್, ಬ್ಯಾಟಿಂಗ್‌ನಲ್ಲಿ ಕೇವಲ 1 ರನ್ ಗಳಿಸಿ ಔಟಾದ್ರು, ಫೀಲ್ಡಿಂಗ್‌ನಲ್ಲಿ ತಮ್ಮ ಖದರ್ ಪ್ರದರ್ಶಿಸಿದರು. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಮೂಲಕ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 340 ರನ್‌ಗಳ ಬೃಹತ್ ಮೊತ್ತವನ್ನೇ ದಾಖಲಿಸಿತು.