
ಗೋವಾ ಮಾದರಿ ಕೆಸಿನೋ ಕರ್ನಾಟಕದಲ್ಲಿ ಸ್ಥಾಪನೆ :ಸಿ.ಟಿ ರವಿ
ಗೋವಾ ಶ್ರೀಲಂಕಾ ಮಾದರಿಯಲ್ಲಿ ಕೆಸಿನೋ (ಜೂಜಾಟ ಕೇಂದ್ರ)ಗಳ ಆರಂಭಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ .
ರಾಜ್ಯಕ್ಕೆ ಬಂದ ಪ್ರವಾಸಿಗರು ಜೂಜಿನ ಸಲುವಾಗಿ ಗೋವಾ ಅಥವಾ ಶ್ರೀಲಂಕಾ ಕಡೆ ಮುಖ ಮಾಡುತ್ತಾರೆ .
ಹಾಗಾಗಿ ವಿದೇಶಿಗರನ್ನು ಸೆಳೆದು ಇಲಾಖೆಯ ಆದಾಯ ಹೆಚ್ಚಿಸಿಕೊಳ್ಳವ ಸಲುವಾಗಿ ಜೂಜು ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ನೀಡಲಿದೆ.
ರಾಜ್ಯದ ಎಲ್ಲೆಡೆ ಇಂತಹ ಕೇಂದ್ರಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ ಕೆಲವೊಂದು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ.
ಜೂಜು ಕೇಂದ್ರಗಳನ್ನ ತೆರೆಯಲು ಪ್ರವಾಸೋದ್ಯಮ ಇಲಾಖೆ ಬಂಡವಾಳ ಹೂಡುವುದಿಲ್ಲ ಬದಲಾಗಿ .
ಸರಕಾರದ ನೀತಿ ನಿಯಮಗಳನ್ನ ಮಾತ್ರ ರೂಪಿಸುತ್ತದೆ .
ಆಸಕ್ತರು ಸರ್ಕಾರದಿಂದ ಅನುಮತಿ ಪಡೆದು ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದರು .
ಈ ಯೋಜನೆಯನ್ನು ಕಾರ್ಯಗತಗೊಳಿಸಲು ಕ್ಲಿಷ್ಟಕರ ಎಂಬುದು ಗೊತ್ತಿದೆ.
ಆದರೆ ಪ್ರವಾಸೋದ್ಯಮವನ್ನ ಉತ್ತೇಜಿಸಿ, ಪ್ರವಾಸಿಗರನ್ನ ಆಕರ್ಷಿಸುವುದು ಅನಿವಾರ್ಯವಾಗಿದೆ .
ರಾಜ್ಯ ಸರ್ಕಾರ ಬಜೆಟ್ನಲ್ಲಿ ಆಹಾರ ಆರೋಗ್ಯ ನೈರ್ಮಲ್ಯ ನೀರು ಮೂಲಸೌಕರ್ಯಕ್ಕೆ ಆದ್ಯತೆ ನೀಡುತ್ತದೆ .
ಆದರೆ ಪ್ರವಾಸೋದ್ಯಮ ಇಲಾಖೆಯು ಹೊಸ ಆಲೋಚನೆಗಳ ಮೂಲಕ ಆದಾಯ ಹೆಚ್ಚಿಸುವ ಪ್ರಯತ್ನ ನಡೆಸಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.