ಜೇಮ್ಸ್ ಮುಹೂರ್ತದಲ್ಲಿ ಅಪ್ಪು ಪವರ್ ಫುಲ್ ಡೈಲಾಗ್ !
'ಜೇಮ್ಸ್' ಸಿನಿಮಾದ ಮುಹೂರ್ತ ಕಾರ್ಯಕ್ರಮ ಜನವರಿ 20
ಶ್ರೀ ಬಾಲಾಂಜನೇಯ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು .
ಸಿನಿಮಾದ ಮೊದಲ ಶಾಟ್ ನಲ್ಲಿ ಪುನೀತ್ ಚಿತ್ರದ ಡೈಲಾಗ್ ಹೇಳಿದ್ದಾರೆ. ''ಅಪ್ಪ ಅಮ್ಮ ಹೆಸರಿಡುವುದು ವಾಡಿಕೆ... ನಮಗೆ ನಾವೇ ಹೆಸರು ಇಟ್ಟುಕೊಂಡರೆ ಬೇಡಿಕೆ...'' ಎಂದು ಅಪ್ಪು ಪವರ್ ಫುಲ್ ಡೈಲಾಗ್ ಹೊಡೆದಿದ್ದಾರೆ.
ಸಿನಿಮಾದ ಮೊದಲ ಡೈಲಾಗ್ ಇದಾಗಿದ್ದು, ಜೇಮ್ಸ್ ಪಾತ್ರದ ಗತ್ತನ್ನು ಈ ಡೈಲಾಗ್ ಪ್ರಸ್ತುತ ಪಡಿಸಿದೆ.
ಈ ಡೈಲಾಗ್ 'ಜೇಮ್ಸ್' ಸಿನಿಮಾದ ಪೋಸ್ಟರ್ ನಲ್ಲಿ ಬಹಳ ದಿನಗಳಿಂದ ಇತ್ತು. ಆದರೆ, ಇದೀಗ ಪುನೀತ್ ಬಾಯಲ್ಲೇ ಡೈಲಾಗ್ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಈ ಚಿತ್ರಕ್ಕೆ ಚೇತನ್ ಕುಮಾರ್ ಅವರ ನಿರ್ದೇಶನವಿದ್ದು ಇದು ಅವರ ನಾಲ್ಕನೇ ಚಿತ್ರವಾಗಿದೆ .
ಕಿಶೋರ್ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ನಿರ್ಮಾಣ ಆಗಲಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಪುನೀತ್ ಅಭಿಮಾನಿಗಳಿಗೆ ಇಷ್ಟ ಆಗುವ ರೀತಿ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಪುನೀತ್ ಈ ಹಿಂದೆ ಕಾಣಿಸಿಕೊಳ್ಳದೆ ಇರುವ ಪಾತ್ರದಲ್ಲಿ ಇಲ್ಲಿ ನಟಿಸುತ್ತಿದ್ದಾರಂತೆ.ಜೇಮ್ಸ್ ಈ ವರ್ಷದ ಬಹು ನಿರೀಕ್ಷಿತ ಚಿತ್ರವಾಗಿದೆ.

'ಜೇಮ್ಸ್' ಚಿತ್ರದ ಮೊದಲ ಡೈಲಾಗ್ ಹೇಳಿದ ಪುನೀತ್ ರಾಜ್ ಕುಮಾರ್
'ಜೇಮ್ಸ್' ಸಿನಿಮಾದ ಮುಹೂರ್ತ ಕಾರ್ಯಕ್ರಮ ಜನವರಿ 20
ಶ್ರೀ ಬಾಲಾಂಜನೇಯ ದೇವಸ್ಥಾನದಲ್ಲಿ ನೆರವೇರಿತು .
ಸಿನಿಮಾದ ಮೊದಲ ಶಾಟ್ ನಲ್ಲಿ ಪುನೀತ್ ಚಿತ್ರದ ಡೈಲಾಗ್ ಹೇಳಿದ್ದಾರೆ. ''ಅಪ್ಪ ಅಮ್ಮ ಹೆಸರಿಡುವುದು ವಾಡಿಕೆ... ನಮಗೆ ನಾವೇ ಹೆಸರು ಇಟ್ಟುಕೊಂಡರೆ ಬೇಡಿಕೆ...'' ಎಂದು ಅಪ್ಪು ಪವರ್ ಫುಲ್ ಡೈಲಾಗ್ ಹೊಡೆದಿದ್ದಾರೆ.
ಸಿನಿಮಾದ ಮೊದಲ ಡೈಲಾಗ್ ಇದಾಗಿದ್ದು, ಜೇಮ್ಸ್ ಪಾತ್ರದ ಗತ್ತನ್ನು ಹೇಳಿದೆ.
ಈ ಡೈಲಾಗ್ 'ಜೇಮ್ಸ್' ಸಿನಿಮಾದ ಪೋಸ್ಟರ್ ನಲ್ಲಿ ಬಹಳ ದಿನಗಳಿಂದ ಇತ್ತು. ಆದರೆ, ಇದೀಗ ಪುನೀತ್ ಬಾಯಲ್ಲೇ ಡೈಲಾಗ್ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಈ ಚಿತ್ರಕ್ಕೆ ಚೇತನ್ ಕುಮಾರ್ ಅವರ ನಿರ್ದೇಶನವಿದ್ದು ಇದು ಅವರ ನಾಲ್ಕನೇ ಚಿತ್ರವಾಗಿದೆ .
ಕಿಶೋರ್ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ನಿರ್ಮಾಣ ಆಗಲಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಪುನೀತ್ ಅಭಿಮಾನಿಗಳಿಗೆ ಇಷ್ಟ ಆಗುವ ರೀತಿ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಪುನೀತ್ ಈ ಹಿಂದೆ ಕಾಣಿಸಿಕೊಳ್ಳದೆ ಇರುವ ಪಾತ್ರದಲ್ಲಿ ಇಲ್ಲಿ ನಟಿಸುತ್ತಿದ್ದಾರಂತೆ.ಜೇಮ್ಸ್ ಈ ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿದೆ.