
ದುನಿಯಾ ವಿಜಯ್ 'ಸಲಗ' ಟೀಸರ್ ರಿಲೀಸ್ ಅಭಿಮಾನಿಗಳಿಗೆ ಡಬ್ಬಲ್ ಖುಷಿ..
ದುನಿಯಾ ವಿಜಿಗೆ ಡಬಲ್ ಧಮಾಕ!
ಸ್ಯಾಂಡಲ್ ವುಡ್ 'ಸಲಗ' "ದುನಿಯಾ ವಿಜಯ್" ಅವರಿಗಿಂದು ಡಬಲ್ ಖುಷಿ
ಒಂದೆಡೆ ಹುಟ್ಟಿದ ಹಬ್ಬ ಮತ್ತೊಂದು ಪ್ರೇಕ್ಷಕರು ಹಾಗೂ ಇಡೀ ಚಿತ್ರರಂಗದ ಹುಬ್ಬೇರುವಂತೆ ಕುತೂಹಲ ಮೂಡಿಸಿರುವ 'ಸಲಗ' ಚಿತ್ರದ ಟೀಸರ್ ರಿಲೀಸ್ ಆಗಿರುವುದು.
ಪಕ್ಕಾ ಮಾಸ್ ಫ್ಯಾನ್ ಫಾಲೋಯಿಂಗ್ ಗಮನದಲ್ಲಿಟ್ಟುಕೊಂಡು 'ಸಲಗ' ತರೆಗೆ ತರಲು ದುನಿಯಾ ವಿಜಯ್ ಮೊದಲ ಬಾರಿಗೆ ನಟನೆ ಜೊತೆ ನಿರ್ದೇಶನ ಕೂಡ ಮಾಡಿದ್ದಾರೆ.
ಚಿತ್ರದಲ್ಲಿ ಡಾಲಿ ಧನಂಜಯ್ ಪೋಲಿಸ್ ಅಧಿಕಾರಿಗಾಗಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಅಚ್ಯುತ್ ಕುಮಾರ್ ,ಕಾಂಕ್ರೋಚ್ ,ಮುಂತಾದವರು ಪಾತ್ರಬಳಗದಲ್ಲಿದ್ದಾರೆ.
ಫ್ಯಾನ್ಸ್ ಜೊತೆ ಹುಟ್ಟಿದ ಹಬ್ಬ ಆಚರಣೆ
ನೆನ್ನೆ ಮದ್ಯರಾತ್ರಿಯಿಂದಲೇ ಸಹಸ್ರ ಸಂಖ್ಯೆಯ ಅಭಿಮಾನಿಗಳ ಜೊತೆ ಹುಟ್ಟಿದ ಹಬ್ಬ ಆಚರಣೆ ಮಾಡಿಕೊಂಡರು.
ಮಧ್ಯರಾತರಿ ೧೨ ಘಂಟೆಗೆ ರಿಯಲ್ ಸ್ಟಾರ್ ಉಪೇಂದ್ರ ಅವರಿಂದ ಸಲಗ ಟೀಸರ್ ಬಿಡುಗಡೆ ಗೊಂಡಿದೆ .
ಈಗಾಗಲೇ ಚಿತ್ರತಂಡ "ಸೂರಿ ಅಣ್ಣ" ಸಾಂಗ್ ಭರ್ಜರಿ ಹಿಟ್ ಕಂಡಿದೆ .
ನೆನ್ನೆ ಬಿಡುಗಡೆಯಾದ ಟೀಸರ್ ಲಕ್ಷ ಲಕ್ಷ ಹಿಟ್ ನೊಂದಿಗೆ ಧೂಳೆಬ್ಬಿಸುತ್ತಿದೆ .