
ಸರಣಿಯನ್ನು ಗೆಲ್ಲುವ ತವಕದಲ್ಲಿ ಟೀಂ ಇಂಡಿಯಾ..!
- ರೋಚಕ ಪಂದ್ಯಕ್ಕೆ ಸಾಕ್ಷಿಯಾಗಲಿರುವ ಮುಂಬೈ.
- ವಿಂಡೀಸ್ ಗೆ ಟಕ್ಕರ್ ನೀಡುಲು ಸಜ್ಜಾದ ಭಾರತದ ಹುಲಿಗಳು.
ಅಲ್ಮಾ ನ್ಯೂಸ್ 24/ಕ್ರೀಡಾ ಸುದ್ದಿ/ ಮುಂಬೈ
ಮುಂಬೈ : ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಕೊನೆಯ ಟಿ-20 ಪಂದ್ಯ ಇಂದು ನಡೆಯಲಿದ್ದು, ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿ ಟೀಮ್ ಇಂಡಿಯಾ ಕಠಿಣ ಅಭ್ಯಾಸವನ್ನು ನಡೆಸುತ್ತಿದೆ.
ಮೊದಲ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಸವಾಲಿನ ಮೊತ್ತ ಬಾರಿಸಿದ್ದರೂ ಫೀಲ್ಡಿಂಗ್ ಹಾಗೂ ಬೌಲಿಂಗ್ ನಲ್ಲಿ ವೈಫಲ್ಯ ಕಂಡು ಸೋಲಿಗೆ ಕಾರಣವಾಗಿತ್ತು.ಇತ್ತ ವಿಂಡೀಸ್ಎರಡನೆ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ.
ಮೂರನೇ ಪಂದ್ಯ ಗೆದ್ದು ಸರಣಿ ಮುಡಿಗೇರಿಸಿಕೊಳ್ಳಲು ಕೊಹ್ಲಿ ಬಳಗ ಪ್ಲಾನ್ ಮಾಡಿದೆ. ಅತ್ತ ವೆಸ್ಟ ಇಂಡೀಸ್ ತಂಡವೂ ಕೂಡ ಭಾರತಕ್ಕೆ ತಿರುಗೇಟು ನೀಡಲು ಕಠಿಣ ತಾಲೀಮು ನಡೆಸಿದೆ.ಸಂಜೆ ಏಳು ಗಂಟೆಗೆ ಮುಂಬೈ ನಲ್ಲಿ ನಡೆಯುವ ಪಂದ್ಯ ಕ್ರೀಡಾಭಿಮಾನಿಗಳಿಗೆ ಅಭಿಮಾನಗಳಿಗೆ ರಸದೌತಣ ನೀಡೋದು ಮಾತ್ರ ಗ್ಯಾರಂಟಿ.