Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 419

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 456

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 481

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 494

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 519

Deprecated: Required parameter $uname follows optional parameter $slug in /home2/thincg4a/public_html/Alma/application/models/Posts_model.php on line 532
Alma

ತಳವಾರ ,ಪರಿವಾರ ಸಿದ್ದಿಗೆ ಎಸ್ಟಿ ಮಾನ್ಯತೆ :ಬಹುದಿನಗಳ ಬೇಡಿಕೆ ಈಡೇರಿಕೆ

ರಾಜ್ಯದ ತಳವಾರ, ಪರಿವಾರ ಮತ್ತು ಸಿದ್ದಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ ನೀಡುವ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಲೋಕಸಭೆ ಅನುಮೋದಿಸಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಈ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು ಮತ್ತು ಮಂಡನೆಯಾದ ದಿನದಂದೇ ಅದನ್ನು ಅನುಮೋದಿಸಲಾಗಿತ್ತು. ಆದರೆ, ಸಮಯದ ಕೊರತೆ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಮಂಡನೆ ಆಗಿರಲಿಲ್ಲ. ಈಗ ಎರಡೂ ಸದನ ತಿದ್ದುಪಡಿ ಮಸೂದೆಯನ್ನು ಅನುಮೋದಿಸಿರುವು ದರಿಂದ ರಾಷ್ಟ್ರಪತಿ ಅಧಿಕೃತ ಮುದ್ರೆ ಯೊಂದೇ ಬಾಕಿ ಉಳಿದಿದೆ.
ಮಂಗಳವಾರ ದಂದು ಮಸೂದೆ ಯನ್ನು ಲೋಕಸಭೆಯಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಮಂಡಿಸಿದರು. ಬಳಿಕ ವಿವಿಧ ರಾಜ್ಯಗಳ ಸಂಸದರು ಮಸೂದೆಯನ್ನು ಬೆಂಬಲಿಸಿ ಮಾತನಾಡಿದರು. ರಾಜ್ಯದ ಪರ ಮಾತನಾಡಿದ ಮೈಸೂರು ಸಂಸದ ಪ್ರತಾಪ್ ಸಿಂಹ, ಕಳೆದ 36 ವರ್ಷಗಳಿಂದ ಈ ಮೂರು ಜನಾಂಗಗಳ ಜನರು ನ್ಯಾಯಕ್ಕಾಗಿ ಕಾದಿದ್ದರು. ಇಂದು ನಮ್ಮೆಲ್ಲರ ಕನಸು ಈಡೇರುತ್ತಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸದಾನಂದ ಗೌಡರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದು ಕನ್ನಡದಲ್ಲಿ ಭಾಷಣ ಮಾಡಿದರು.
ರಾಜ್ಯದಲ್ಲಿ 15-18 ಲಕ್ಷ ಪರಿವಾರ-ತಳವಾರ ಸಮುದಾಯದವರಿದ್ದು, ಮೈಸೂರು ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಳಗಾವಿ, ಉತ್ತರ ಕನ್ನಡ, ಧಾರ ವಾಡ ಕೆಲ ಭಾಗಗಳಲ್ಲಿ ಸಿದ್ದಿ ಸಮಾಜದವರು ನೆಲೆಸಿದ್ದಾರೆ.