
ಹೊಸ ಜೀವನಕ್ಕೆ ಕಾಲಿಟ್ಟ ಹಾಸ್ಯ ನಟ ಯೋಗಿಬಾಬುಗೆ ಸರ್ಪ್ರೈಸ್ ನೀಡಿದ ನಟ ಧನುಷ್
ಕಾಲಿವುಡ್ ಬೇಡಿಕೆಯ ಹಾಸ್ಯನಟ ಯೋಗಿಬಾಬು ಇತ್ತೀಚಿಗಷ್ಟೆ ತಮ್ಮ ಗೆಳತಿ ಭಾರ್ಗವಿ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ .ಯೋಗಿಬಾಬು ಮದುವೆ ಸಂಭ್ರಮವನ್ನು ಸಿನಿಮಾ ಸೆಟ್ನಲ್ಲಿ ಆಚರಿಸಿ ತಮಿಳು ಸೂಪರ್ ಸ್ಟಾರ್ ಧನುಶ್ ದುಬಾರಿ ಉಡುಗೊರೆ ನೀಡಿದ್ದಾರೆ.
ಧನುಶ್ ನಟನೆಯ ಕರ್ಣನ್ ಚಿತ್ರದಲ್ಲಿ ಯೋಗಿಬಾಬು ಹಾಸ್ಯನಟನಾಗಿ ನಟಿಸುತ್ತಿದ್ದಾರೆ. ಸದ್ಯ ಕರ್ಣನ್ ಚಿತ್ರೀಕರಣ ನಡೆಯುತ್ತಿದ್ದು,ಯೋಗಿಬಾಬು ಮದುವೆ ಆದ ಪ್ರಯುಕ್ತ ಸೆಟ್ ನಲ್ಲಿ ಕೇಕ್ ಕತ್ತರಿಸಿ ಧನುಶ್ ಮತ್ತು ಚಿತ್ರತಂಡ ಸಂಭ್ರಮಿಸಿದರು .
ಯೋಗಿಬಾಬು ಮದುವೆ ವಿಶೇಷವಾಗಿ ಧನುಶ್ ಚಿನ್ನದ ಚೈನ್ ಉಡುಗೊರೆಯಾಗಿ ನೀಡಿದ್ದಾರೆ.ಸಹನಟನೊಬ್ಬನ ಖಾಸಗಿ ಜೀವನದ ಖುಷಿಯ ಸಂಭ್ರಮದಲ್ಲಿ ತಾನು ಭಾಗಿಯಾಗಿ, ದುಬಾರಿ ಗಿಫ್ಟ್ ನೀಡಿರುವುದು ಧನುಶ್ ಅವರ ಸರಳತೆಗೆ ಮತ್ತೊಂದು ಉದಾಹರಣೆ ಎಂದು ಹೊಗಳುತ್ತಿದ್ದಾರೆ ಅವರ ಫ್ಯಾನ್ಸ್.
ಫೆಬ್ರವರಿ 5 ರಂದು ಖಾಸಗಿಯಾಗಿ ಕುಟುಂಬಸ್ಥರ ಹಾಗೂ ಕೆಲವೇ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದ ಯೋಗಿಬಾಬು, ಮಾರ್ಚ್ ತಿಂಗಳಲ್ಲಿ ಅದ್ಧೂರಿಯಾಗು ಆರತಕ್ಷತೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದಾರೆ.2019ರಲ್ಲಿ ಅನೇಕ ಚಿತ್ರದಲ್ಲಿ ನಟಿಸಿರುವ ಈ ನಟ ತಮಿಳು ಚಿತ್ರರಂಗದ ಬೇಡಿಕೆ ನಟರಲ್ಲಿ ಇವರು ಸಹ ಒಬ್ಬರಾಗಿದ್ದಾರೆ .