20 ಲಕ್ಷ ಕೋಟಿ ಬೃಹತ್ ಪ್ಯಾಕೆಜ್ ನ ಲಾಭ ಯಾರಿಗೆ? ಮಾಹಿತಿ ಬಿಚ್ಚಿಟ್ಟ ವಿತ್ತಸಚಿವೆ ನಿರ್ಮಲಾ ಸಿತಾರಮನ್ : ಆದಾಯ ತೆರಿಗೆ ಪಾವತಿದಾರರಿಗೆ ಕೇಂದ್ರದ ಬಂಪರ್ ಗಿಫ್ಟ್ : ಸಣ್ಣ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ಸಾಲ....

ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತಾಡುವಾಗ ಪ್ರಧಾನಿ ಮೋದಿ ದೇಶದ ಆರ್ಥಿಕ ಪುನಶ್ಚೇತನಕ್ಕೆ ಬರೋಬ್ಬರಿ 20 ಲಕ್ಷ ಕೋಟಿ ಮೊತ್ತದ ಬ್ರಹತ್ ಆರ್ಥಿಕ ಪ್ಯಾಕೇಜ್ ನ್ನು ಘೋಷಣೆ ಮಾಡಿದ್ದರು. ಮೋದಿ ಘೋಷಿಸಿದ ಆರ್ಥಿಕ ಪ್ಯಾಕೇಜ್ ನ ವಿವರಣೆಯನ್ನು ಇಂದು ಕೇಂದ್ರ ಸಚಿವೆ ನಿರ್ಮಲಾ ಸಿತಾರಮನ್ ನೀಡಿದ್ದಾರೆ.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸಿತಾರಮನ್ ಆರ್ಥಿಕ ಪ್ಯಾಕೇಜ್ ಒಳಗೊಂಡಿರುವ ಮಹತ್ವದ ಯೋಜನೆಗಳ ಕುರಿತು ಮಾಹಿತಿ ನೀಡಿದರು. 
ವಿತ್ತ ಸಚಿವರ ಸುದ್ದೀಗೊಷ್ಠಿಯ ಪ್ರಮುಖ ಹೈಲೈಟ್ಸ್ ಇಲ್ಲಿವೆ....

* ಲಾಕ್ ಡೌನ್ ಹಿನ್ನಲೆ ನಷ್ಟ ಅನುಭವಿಸಿರುವ ಸಣ್ಣ ಕೈಗಾರಿಕೆಗಳಿಗೆ ಯಾವುದೇ ಅಡಮಾನವಿಲ್ಲದೇ 3 ಲಕ್ಷ ಕೋಟಿಯ ಸಾಲ...ಇದರಿಂದ ದೇಶದ 45 ಲಕ್ಷ ಸಣ್ಣ ಕೈಗಾರಿಕೆಗಳಿಗೆ ಅನುಕೂಲ...

* ಸಣ್ಣ ಕೈಗಾರಿಕೆಗಳಿಗೆ ಸಾಲ ಮರುಪಾವತಿಸಲು ನಾಲ್ಕು ವರ್ಷಗಳ ಕಾಲಾವಕಾಶ...

* ಆದಾಯ ತೆರಿಗೆ ಪಾವತಿಯ 18 ಸಾವಿರ ಕೋಟಿ ವಾಪಸ್...ಆದಾಯ ತೆರಿಗೆ ಪಾವತಿಸಿದವರಿಗೆ ಈಗಾಗಲೇ ಐಟಿ ರಿಫಂಡ್ ಮಾಡಲಾಗಿದೆ.

* ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿ ನವಂಬರ್ 30 ರ      ವರೆಗೆ ವಿಸ್ತರಣೆ...

* ಮುಂದಿನ ಮೂರು ತಿಂಗಳುಗಳು ಅಂದರೆ ಜೂನ್,ಜುಲೈ ಹಾಗೂ ಆಗಸ್ಟ್ ತಿಂಗಳ ಇಪಿಎಫ್ ನ ನೌಕರರ ಪಾಲನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸಲಿದೆ.ಇದರಿಂದ 72.5 ಲಕ್ಷ ಕಾರ್ಮಿಕರಿಗೆ ಲಾಭ...ಜೊತೆಗೆ ಉದ್ಯೋಗದಾತರ ಪಾಲು ಶೇ.12 ರಿಂದ ಶೇ.10 ಕ್ಕೆ ಇಳಿಕೆ.

* ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಕೇಂದ್ರದಿಂದ 45 ಸಾವಿರ ಕೋಟಿಯ ನೆರವು. ಗ್ರಹಸಾಲ ಹಾಗೂ ಸಣ್ಣ ಸಾಲ ನೀಡುವ ಸಂಸ್ಥೆಗಳಿಗೆ ಈ ಯೋಜನೆ ಅಡಿಯಲ್ಲಿ ಸಾಲದ ನೆರವು. 

* ಲಾಕ್ ಡೌನ್ ಕಾರಣ ನಷ್ಟ ಅನುಭವಿಸಿರುವ ವಿದ್ಯುತ್ ಸರಬರಾಜು ಕಂಪನಿಗಳಿಗೆ 90 ಸಾವಿರ ಕೋಟಿ ನೀಡಿಕೆ..

* 200 ಕೋಟಿ ವರೆಗಿನ ಟೆಂಡರ್ ನಲ್ಲಿ ವಿದೇಶಿ ಕಂಪನಿಗಳು ಭಾಗವಹಿಸುವಂತಿಲ್ಲ....

* ಸರ್ಕಾರಿ ಗುತ್ತೆದಾರರಿಗೆ ಬಾಕಿ ಉಳಿಸಿಕೊಂಡಿರುವ ಯೋಜನೆ ಪೂರ್ಣಗೊಳಿಸಲು 6 ತಿಂಗಳ ಕಾಲಾವಕಾಶ...

*ಟಿಡಿಎಸ್/ಟಿಸಿಎಸ್ ಅನ್ನು ಶೇ.25 ರಷ್ಟು ಕಡಿತ ಮಾಡಿದ ಕೇಂದ್ರ ಸರ್ಕಾರ...

ಹೀಗೆ ಸ್ವಾವಲಂಬಿ ಭಾರತದ ನಿರ್ಮಾಣದ ಕನಸಿನೊಂದಿಗೆ ಹಾಗೂ ಕೊರೊನಾ ಸಂಕಷ್ಟದ ಕಾರಣ ಕುಸಿದಿರುವ ದೇಶದ ಆರ್ಥಿಕತೆ ಸುಧಾರಣೆಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿದೆ.