ಜಗತ್ತಿನಲ್ಲೇ ಕೆಟ್ಟ ಟ್ರಾಫಿಕ್ ಹೊಂದಿರುವ ನಗರಗಳ ಪೈಕಿ ಬೆಂಗಳೂರಿಗೆ ಮೊದಲನೇ ಸ್ಥಾನ.....
ನವದೆಹಲಿ : ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪೈಕಿ ಬೆಂಗಳೂರಿಗೆ ಮೊದಲನೇ ಸ್ಥಾನ ದೊರೆತಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಬೆಂಗಳೂರು ಕುಖ್ಯಾತಿಗೆ ಪಾತ್ರವಾಗಿದೆ.
ನೇದರಲ್ಯಾಂಡ್ ಮೂಲದ ಟಾಮ್ ಟಾಮ್ ಸಂಸ್ಥೆ ನಡೆಸಿರುವ ಸಮಿಕ್ಷೇಯಲ್ಲಿ ಈ ವಿಷಯ ಬಹಿರಂಗವಾಗಿದ್ದು, ವಿಶ್ವ ಟ್ರಾಫಿಕ್ ಇಂಡೆಕ್ಸ್ - 2019 ರಲ್ಲಿ ಅತಿ ಹೆಚ್ಚು ಟ್ರಾಫಿಕ್ ಇರುವ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಇನ್ನು ಎರಡನೇ ಸ್ಥಾನದಲ್ಲಿರೊದು ಫಿಲಿಫೈನ್ಸ್ ದೇಶದ ರಾಜಧಾನಿ ಮನಿಲಾ.
ಇನ್ನು ಬೆಂಗಳೂರಿನ ಜೊತೆಗೆ ಟಾಪ್ 10 ರ ಪಟ್ಟಿಯಲ್ಲಿ ಭಾರತದ ಇನ್ನು ಮೂರು ನಗರಗಳು ಸ್ಥಾನ ಪಡೆದುಕೊಂಡಿದ್ದು, ಮುಂಬೈ 4 ನೇ ಸ್ಥಾನದಲ್ಲಿ, ಪುಣೆ 5 ನೇ ಸ್ಥಾನದಲ್ಲಿ ಹಾಗೂ ದೆಹಲಿ 8 ನೇ ಸ್ಥಾನದಲ್ಲಿದೆ.