ಈ ಬಾರಿ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳಲಿದೆಯೇ.....?

ಹೊಸ  ವರ್ಷದ ಆಗಮನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಬೆಂಗಳೂರು ಜನ ಸಹ ಹೊಸ ವರ್ಷವನ್ನು  ಅದ್ದೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಆದರೆ ಬೆಂಗಳೂರು ಜನರ ಈ ಸಂಭ್ರಮಾಚರಣೆಗೆ ನಿಷೇಧದ ಆತಂಕ ಕಾಡುತ್ತಿದೆ.

ಹೌದು, ಆಚರಣೆಯ ಕೇಂದ್ರ ಬಿಂದುಗಳಾದ ಎಂ.ಜಿ ರೋಡ್ ಹಾಗೂ ಬ್ರಿಗೇಡ್ ರೋಡ್ ಗಳಲ್ಲಿ ಡಿಸೆಂಬರ್ 31 ರ ಮಧ್ಯರಾತ್ರಿ ಹೊಸ ವರ್ಷಾಚಾರಣೆ, ಮದ್ಯಪಾನ ಹಾಗೂ 
ಧೂಮಪಾನ ಗಳನ್ನು ನಿಷೇಧಿಸಬೆಕೇಂದು ಹಿಂದೂ ಜನಜಾಗ್ರತಿ ಸಮಿತಿ  ಬೆಂಗಳೂರು ನಗರ ಪೋಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಪಾಶ್ಚಾತ್ಯ ಸಂಸ್ಕ್ರತಿಯಿಂದ ಪ್ರೇರಿತರಾಗಿ ಮಾಡುತ್ತಿರುವ ಈ ಆಚರಣೆಯಲ್ಲಿ ಧೂಮಪಾನ , ಮದ್ಯಪಾನ ಹಾಗೂ ಡ್ರಗ್ಸ್ ಸೇವನೆ ಅಧಿಕ ಪ್ರಮಾಣದಲ್ಲಿ ಆಗುತ್ತಿದೆ. ಹಾಗೂ ಆಚರಣೆಯ ಸಮಯದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಕಾನೂನು ಸುವ್ಯವಸ್ಥೆ ಹದಗೆಡುತ್ತೀದೆ. ಆದ್ದರಿಂದ ಹೊಸ ವರ್ಷಾಚರಣೆಗೆ ಅನುಮತಿ ನೀಡಬಾರದೆಂದು ತಮ್ಮ ಮನವಿ ಪತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ.

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ, ನವೀನ ಗೌಡ, ಅರುಣ ಗೌಡ ಮತ್ತು ವಿಜಯ ವಿವೇಕ ಪ್ರತಿಷ್ಠಾನ ದ ಟ್ರಸ್ಟಿ ಶ್ರೀಮತಿ ಶಕೀಲಾ ಶೆಟ್ಟಿ ‌ಮುಂತಾದವರು ಉಪಸ್ತಿತರಿದ್ದರು.

ಈ ಸಮಯದಲ್ಲಿ ಭಾಸ್ಕರ ರಾವ್  ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ‌ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.