ಫಾಸ್ಟ್ ಟ್ಯಾಗ್ ನಿಯಮ ಇನ್ನು ಒಂದು ತಿಂಗಳ ಮುಂದಕ್ಕೆ
ನವದೆಹಲಿ: ದೇಶಾದ್ಯಂತ ಇಂದಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ಘೋಷಿಸಲಾಗಿದ್ದರೂ, ಇನ್ನೂ 1 ತಿಂಗಳ ಕಾಲ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದೆ ಎನ್ನಲಾಗುತ್ತಿದೆ.
ನೂರಕ್ಕೆ ನೂರರಷ್ಟು ಕಡ್ಡಾಯ ಎಂದಿದ್ದನ್ನು ಶೇ.75ಕ್ಕೆ ಇಳಿಸಲಾಗಿದೆ. ಅಂದರೆ ಟೋಲ್ ಪ್ಲಾಜಾಗಳ ಶೇ.75 ಲೇನ್‌ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಉಳಿದ ಶೇ.25ರಷ್ಟು ಲೇನ್‌ಗಳನ್ನು ಹೈಬ್ರಿಡ್ ಲೇನ್‌ಗಳೆಂದು ಪರಿಗಣಿಸಬಹುದು. ಈ ಲೇನ್‌ಗಳಲ್ಲಿ ಫಾಸ್ಟ್ ಟ್ಯಾಗ್ ಇಲ್ಲದೆಯೂ, ನಗದು ಸೇರಿದಂತೆ ಇತರ ಸಾಮಾನ್ಯ ಪದ್ಧತಿಯಲ್ಲೂ ಶುಲ್ಕ ಪಾವತಿಸಬಹುದು. ಈ ವ್ಯವಸ್ಥೆ 1 ತಿಂಗಳು ಲಭ್ಯ ಎಂದು ಸಾರಿಗೆ ಇಲಾಖೆ ತಿಳಿಸಿದೆ