ಪಾಕಿಸ್ತಾನ ವಿಮಾನ ದುರಂತಕ್ಕೆ ಕಾರಣವಾಯ್ತಾ ಪೈಲಟ್ ನ ಆ ಒಂದು ತಪ್ಪು....
ಇತ್ತಿಚಿಗೆ 90 ಜನ ಪ್ರಯಾಣಿಕರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಸಂಚರಿಸುತ್ತಿದ್ದ ಪಾಕಿಸ್ತಾನ ಅಂತರಾಷ್ಟ್ರೀಯ ವಿಮಾನ ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಜನವಸತಿ ಪ್ರದೇಶವೊಂದರಲ್ಲಿ ನೆಲಕ್ಕಪ್ಪಳಿಸಿತ್ತು. ಘಟನೆಯಲ್ಲಿ ಒಟ್ಟು 97 ಜನರು
ಮೃತಪಟ್ಟಿದ್ದರು.
ಆದ್ರೆ ಈ ಘಟನೆ ನಡೆಯಲು ಪೈಲಟ್ ನಿರ್ಲಕ್ಷ್ಯವೇ ಕಾರಣವಾ ಎಂಬ ಅನುಮಾನ ಈಗ ಮೂಡುತ್ತಿದೆ.ಸಾಮಾನ್ಯವಾಗಿ ವಿಮಾನದ ಲ್ಯಾಂಡಿಂಗ್ ಸಮಯ ಹತ್ತಿರವಾಗುತ್ತಿದ್ಡಂತೆ ನಿಗದಿತ ಎತ್ತರದಲ್ಲಿ ಹಾಗೂ ನಿಗದಿತ ವೇಗದಲ್ಲಿ ಹಾರಾಡಬೇಕು. ಆದ್ರೆ ಪಾಕಿಸ್ತಾನದ A320 ವಿಮಾನ ಲ್ಯಾಂಡಿಂಗ್ ಮಾಡಲು 3500 ಅಡಿ ಎತ್ತರದಲ್ಲಿ ತಂದಾಗ ನಿಗದಿತ ವೆಗಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತಿತ್ತು.
ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ಪೈಲಟ್ ಗೆ ನೀವು ಅಪಾಯಕಾರಿ ವೇಗದಲ್ಲಿ ವಿಮಾನ ಚಲಾಯಿಸುತ್ತಿದ್ಡಿರಿ ಎಂದು ಹೇಳಿದರೂ ಅದನ್ನು ನಿರ್ಲಕ್ಷ್ಯ ಮಾಡಿದ ಪೈಲಟ್ ನಾನು ಕಂಫರ್ಟೇಬಲ್ ಆಗಿದ್ಡಿನಿ ಎಂದು ಹೇಳಿದ್ದಾನೆ.ಏರ್ ಟ್ರಾಫಿಕ್ ಕಂಟ್ರೋಲ್ ನ ಅಧಿಕಾರಿ ಹಾಗೂ ಪೈಲಟ್ ನಡುವೆ ನಡೆದ ಸಂಭಾಷಣೆಯಿಂದ ಈ ವಿಚಾರ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಖಾಲಿ ಹೊಟ್ಟೆಯಲ್ಲಿ ಪೈಲಟ್ ಗಳು ವಿಮಾನ ಚಲಾಯಿಸಲು ವಿಮಾನಯಾನ ಸಂಸ್ಥೆಗಳು ಅನುಮತಿ ನೀಡುವುದಿಲ್ಲ..ಆದ್ರೆ ಪಾಕಿಸ್ತಾನದ A320
ವಿಮಾನದ ಪೈಲಟ್ ಸಾಜಿದ್ ಗುಲ್ ಅಂದು ರಂಜಾನ್ ಹಬ್ಬದ ರೋಜಾದಲ್ಲಿದ್ದರು. ಅವರು ಉಪವಾಸ ಮಾಡುತ್ತಿರುವ ಸಂಧರ್ಭದಲ್ಲೂ ಅವರನ್ನು ನಾಗರಿಕ ವಿಮಾನ ಚಲಾವಣೆಗೆ ಅನುಮತಿ ನೀಡಿದ್ದು ಯಾಕೆ ಎಂಬ ಪ್ರಶ್ನೆ ಸಹ ಎಲ್ಲರನ್ನೂ ಕಾಡುತ್ತಿದೆ. ಒಟ್ಟಾರೆ ಯಾರದೋ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಪ್ರಾಣ ಕಳೆದುಕೊಂದಿದ್ದು ನಿಜಕ್ಕೂ ದುರಂತ....