ಕೊರೊನಾ ಸಂಕಷ್ಟದ ನಡುವೆಯೂ ಕಮಲ ನಾಯಕರ ರಾಜಕೀಯ ಚದುರಂಗದಾಟ..ಸಿಎಂ ಯಡಿಯೂರಪ್ಪ ಗೆ ಅಮಿತ್ ಷಾ ಅಭಯಹಸ್ತ...
ಕೊರೊನಾ ಸಮಸ್ಯೆ ಹೇಗೆ ಬಗೆಹರಿಸಬೇಕು...ಈ ಬಿಕ್ಕಟ್ಟಿನಿಂದ ಹೇಗೆ ಹೊರಬರಬೇಕು ಎಂದು ಕರ್ನಾಟಕ ಮಾತ್ರವಲ್ಲ..ಇಡಿ ವಿಶ್ವೇವೇ ಚಿಂತಿಸುತ್ತಿದೆ. ಆದ್ರೆ ನಮ್ಮ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಶಾಸಕರಿಗೆ ಮಾತ್ರ ಕೊರೊನಾ ಬಗ್ಗೆ ಯಾವ ಚಿಂತೆಯೂ ಇಲ್ಲಾ..ಅವರು ಎಂದಿನಂತೆ ತಮ್ಮ ರಾಜಕೀಯದ ಚದುರಂಗದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾಳ ಉರುಳಿಸುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಇತ್ತೀಚಿಗೆ ಉತ್ತರ ಕರ್ನಾಟಕ ಭಾಗದ 25 ಕ್ಕೂ ಹೆಚ್ಚಿನ ಬಿಜೆಪಿ ಶಾಸಕರು ಬೆಳಗಾವಿಯ ಬಿಜೆಪಿ ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ಆಯೋಜಿಸಲಾಗಿದ್ದ ಉಪಹಾರ ಕೂಟದಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಪಾಲ್ಗೊಂಡಿದ್ದ ನಾಯಕರೆಲ್ಲರೂ ತಾವು ಸೇರಿದ್ದು ಕೇವಲ ಊಟ ಮಾಡುವುದಕ್ಕಾಗಿ ಹಾಗೂ ಇಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ ಎಂದೇ ಹೇಳಿದರು.ಆದರೆ ನಾಲ್ಕು ಜನ ರಾಜಕಾರಣಿಗಳು ಒಂದೆಡೆ ಸೇರಿದ್ದಾಗ ರಾಜಕೀಯದ ಕುರಿತು ಚರ್ಚೆ ಮಾಡಿಲ್ಲ ಅಂದ್ರೆ ನಂಬೊ ಮಾತಾ..? ಖಂಡಿತವಾಗಿಯೂ ಇಲ್ಲಾ.
ಯೆಸ್.. ಶಾಸಕ ಉಮೇಶ್ ಕತ್ತಿ ಮನೆಯಲ್ಲಿ ಶಾಸಕರೆಲ್ಲರೂ ಸೇರಿದ್ದು ಕೇವಲ ಊಟ ಮಾಡಲು ಅಲ್ಲಾ.. ಬದಲಿಗೆ ಬಂಡಾಯ ಸಾರಲು..ಹೌದು ತನಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡದಿರುವುದು ಸೇರಿದಂತೆ ಹಲವು ಕಾರಣಗಳಿಗಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೇಲೆ ಮುನಿಸಿಕೊಂಡಿರುವ ಶಾಸಕ ಉಮೇಶ್ ಕತ್ತಿ , ಬಂಡಾಯ ಸಾರಿದ್ದಾರೆ. ಸಮಾನ ಮನಸ್ಕ ಶಾಸಕರನನ್ನೆಲ್ಲ ಗುಂಪು ಕೂಡಿಸಿಕೊಂಡು ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮುಂದೆ ಬೇಡಿಕೆಯಿಟ್ಟೀದ್ದಾರೆ.
ಹಾಗಂತ ನಾಯಕತ್ವ ಬದಲಾವಣೆ ಅಷ್ಟು ಸುಲಭವಲ್ಲ...ಯಡಿಯೂರಪ್ಪ ಬಿಜೆಪಿ ಪಕ್ಷದ ಮಾಸ್ ಲೀಡರ್..ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ...ಇಡಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಿದ್ದು ಸಹ ಇದೇ ಯಡಿಯೂರಪ್ಪ..
ಇಂತಹ ಮಾಸ್ ಇಮೇಜ್ ಹೊಂದಿರುವ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ, 2013 ರ ವಿಧಾನಸಭೆ ಚುನಾವಣೆಯಲ್ಲಿ ಆದ ಗತಿಯೇ ಬಿಜೆಪಿಗೆ ಮುಂದಿನ ಚುನಾವಣೆಯಲ್ಲೂ ಆಗುವುದು ನಿಶ್ಚಿತ....
ಸಭೆ ಸೇರುವುದು..ಬಂಡಾಯ ಸಾರುವುದು ಎಲ್ಲವೂ ರಾಜಕೀಯದಲ್ಲಿ ಸಹಜ..ಅದು ಸರಿಯೋ ತಪ್ಪೋ ಎನ್ನುವುದು ಬೇರೆ ವಿಚಾರ. ಆದರೆ ಈಗ ಪ್ರಶ್ನೆ ಇರುವುದು ಕೊರೊನಾ ಸಂಕಷ್ಟದ ಸಮಯದಲ್ಲಿ
ಶಾಸಕರು ರಾಜಕೀಯ ಮಾಡಲು ಹೊರಟಿರುವುದು ಎಷ್ಟು ಸಮಂಜಸ...ಮಹಾಮಾರಿಯೊಂದು ರಾಜ್ಯಕ್ಕೆ ಅಪ್ಪಳಿಸಿ ಆರ್ಭಟಿಸುತ್ತಿರುವ ಸಮಯದಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕೇ ಹೊರತು ತಮ್ಮ ರಾಜಕೀಯ ಹಿತಾಸಕ್ತಿಯ ಕುರಿತು ಚಿಂತಿಸಬಾರದು.
ಪಕ್ಷದೊಳಗೆ ಈ ರೀತಿಯ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದ್ದರೆ, ಮುಖ್ಯಮಂತ್ರಿ ಎನಿಸಿಕೊಂಡವರು ಆಡಳಿತದ ಕಡೆಗೆ ಗಮನ ಹರಿಸಲು ಸಾಧ್ಯವೇ...? ಇನ್ನು ಬಿಜೆಪಿಯ ಹಿರಿಯ ನಾಯಕ ಕೇಂದ್ರ ಗ್ರಹ ಸಚಿವ ಅಮಿತ್ ಷಾ ಯಡಿಯೂರಪ್ಪ ಗೆ ಕರೆ ಮಾಡಿ ನೀವು ಆಡಳಿತದ ಕಡೆ ಗಮನ ಕೊಡಿ..ಬೇರೆ ವಿಚಾರಗಳನ್ನು ನಾವು ನೊಡಿಕೊಳ್ಳುತ್ತೇವೆ ಎಂದು ಹೇಳಿರುವುದು ಯಡಿಯೂರಪ್ಪ ಗೆ ಕೊಂಚ ನೆಮ್ಮದಿ ತಂದಿದೆ...ಇನ್ನಾದರೂ ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಕೊರೊನಾ ಕಷ್ಟ ದೂರಾಗೋವರೆಗೂ ತಮ್ಮ ರಾಜಕೀಯವನ್ನು ಬದಿಗಿಡಬೇಕಾಗಿದೆ.