ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರಲು ಟ್ರಂಪ್ ನಿರ್ಧಾರ....

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರಲು ಟ್ರಂಪ್ ನಿರ್ಧಾರ....

ಕೊರೊನಾ ರೋಗ ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ ಎಂದು ಮೊದಲಿನಿಂದಲೂ ದೂರುತ್ತಲೇ ಬಂದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್
ಟ್ರಂಪ್ ಸದ್ಯ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕಾ ಹೊರಬರುವುದಾಗಿ ಘೋಷಿಸಿದ್ದಾರೆ.  ಆದರೆ ಯಾವಾಗ ಅಮೆರಿಕಾ ಹೊರಬರುತ್ತದೆ ಎಂದು ಅವರು ತಿಳಿಸಿಲ್ಲ...

ಈ ಮೊದಲು ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ವಾರ್ಷಿಕ ದೇಣಿಗೆಯನ್ನು ತಡೆಹಿಡಿಡಿದ್ದ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆಗೆ ತನ್ನ ಕಾರ್ಯಗಳಲ್ಲಿ ಸುಧಾರಣೆ ತರುವಂತೆ ಸೂಚಿಸಿತ್ತು. ಆದ್ರೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಾನು ಸೂಚಿಸಿದ ಯಾವುದೇ ಸುಧಾರಣೆ ಕಂಡುಬರುತ್ತಿಲ್ಲ ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿದೆ. ಕೊರೊನಾ ವಿಚಾರದಲ್ಲಿ ಜಗತ್ತನ್ನು ತಪ್ಪು ದಾರಿಗೆಳೆಯುವ ಚೀನಾದ ಪ್ರಯತ್ನವನ್ನು ಪತ್ತೆ ಹಚ್ಚುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ. ವಾರ್ಷಿಕ ಅಮೆರಿಕಾ 450 ಮಿಲಿಯನ್ ಡಾಲರ್ ದೇಣಿಗೆಯನ್ನು ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದರೂ  ವಾರ್ಷಿಕ ಕೇವಲ 40 ಮಿಲಿಯನ್ ಡಾಲರ್ ದೇಣಿಗೆ ನೀಡುವ ಚೀನಾದ ಪ್ರಭಾವಕ್ಕೆ ಒಳಗಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟ್ರಂಪ್
ದೂರಿದರು.

ಟ್ರಂಪ್ ನಿರ್ಧಾರಕ್ಕೆ ಟೀಕೆ......

ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವ ಟ್ರಂಪ್ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಡಬ್ಲ್ಯೂಎಚ್ಒ ರಾಷ್ಟ್ರಗಳ ನಡುವಿನ ಸಹಕಾರ ವೇದಿಕೆಯಾಗಿದೆ. ಕೊರೊನಾ ಸಂಕಷ್ಟ ಸಮಯದಲ್ಲಿ 
ಅಂತರಾಷ್ಟ್ರೀಯ ಸಂಸ್ಥೆಯಿಂದ ಅಮೆರಿಕಾ ಹೊರನಡೆದಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.