ಅಂಡಮಾನ್ ಜೈಲಿನಲ್ಲಿ ವೀರ್ ಸಾವರ್ಕರ್ ಅನುಭವಿಸಿದ್ದ ಶಿಕ್ಷೆ ಎಂತಹುದು ಗೊತ್ತಾ...? ಈ ಸ್ಟೋರಿ ನೋಡಿ.

ವೀರ್ ಸಾವರ್ಕರ್... ಭಾರತದ ಸ್ವಾತಂತ್ರ್ಯ ಹೊರಾಟದ ಇತಿಹಾಸದಲ್ಲಿ ಈ ಹೆಸರಿಗೆ ವಿಶೇಷ ಸ್ಥಾನವಿದೆ. ಬ್ರಿಟಿಷರನ್ನು ಅವರ ದೇಶಕ್ಕೆ ಹೋಗಿ ಅಲ್ಲಿಯೇ ಸಂಘಟನೆ ಕಟ್ಟಿ ಅವರ ವಿರುದ್ಧ ಪ್ರತಿಭಟನೆ ಮಾಡಿದವರು ವೀರ್ ಸಾವರ್ಕರ್.

ಬಾಲ್ಯದಿಂದಲೇ ಅಪ್ರತಿಮ ದೇಶಭಕ್ತರಾಗಿದ್ದ ವಿನಾಯಕ್ ದಾಮೋದರ್ ಸಾವರ್ಕರ್ ಬ್ರಿಟಿಷರ ಎದೆ ನಡಗುವಂತೆ ಮಾಡಿದ್ದರು. ವೀರ್ ಸಾವರ್ಕರ್ ಕುರಿತು ಬ್ರಿಟಿಷರಿಗೆ ಅದ್ಯಾವ ಮಟ್ಟಿನ ಭಯ ಇತ್ತೆಂದರೆ ವೀರ್ ಸಾವರ್ಕರ್ ಬರೆದ ಪುಸ್ತಕ ಪ್ರಕಟಣೆ ಆಗುವ ಮೊದಲೇ ಅದನ್ನು ನಿಷೇಧಿಸಿದರು.

ವೀರ್ ಸಾವರ್ಕರ್ ಹೋರಾಟದಿಂದ ಬೆಚ್ಚಿದ್ದ ಆಂಗ್ಲರು ವೀರ್ ಸಾವರ್ಕರ್ ರನ್ನು ಬಂಧಿಸಿ ಶಿಕ್ಷೆಗೋಳಪಡಿಸಿದರು.... ಆದರೆ ವೀರ್ ಸಾವರ್ಕರ್
ಗೆ ಬ್ರಿಟಿಷರು ವಿಧಿಸಿದ ಶಿಕ್ಷೆ ಮಾತ್ರ ನಿಜಕ್ಕೂ ಘನಘೋರ.. ಅದು ಅಂಡಮಾನ್ ಜೈಲಿನಲ್ಲಿ 
50 ವರ್ಷ ಕಾಲಾವಧಿಯ ಕರಿನೀರಿನ ಶಿಕ್ಷೆ....

ಕರಿನೀರಿನ ಶಿಕ್ಷೆ ಎಂದರೆ ಅದು ಸಾವಿನ ಮನೆ ಅಂತಲೇ ಅರ್ಥ. ಹೊರಗಿನ ಯಾರ ಸಂಪರ್ಕವೂ ಇಲ್ಲದ, ದೇಶದಿಂದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಇರಲಿಲ್ಲ.

ಸುತ್ತ ಎತ್ತ ನೋಡಿದರು ಬರೀ ಸಮುದ್ರ...ಜೈಲಿನಲ್ಲಿರುವ ಇತರ ಖೈದಿಗಳೊಂದಿಗೆ ಮಾತನಾಡುವಂತೆಯೂ ಇರಲಿಲ್ಲ...ಹೊಟ್ಟೆಗೆ ಸರಿಯಾಗಿ ಊಟವನ್ನು ನೀಡದೇ ದಿನಕ್ಕೆ 10 ಗಂಟೆಗಳ ಕಾಲ ದುಡಿಸಿಕೊಳ್ಳಲಾಗುತ್ತಿತ್ತು. ಇಂಥ ಭಯಾನಕ ವಾತವರಣದಲ್ಲಿ 1911 ರಿಂದ 1924 ರ ವರೆಗೆ ವೀರ್ ಸಾವರ್ಕರ್ ಭಂದಿಯಾಗಿದ್ದರು...