ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ವಿಶ್ವ ಮಾನವ ದಿನವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ....

ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನದ ಪ್ರಯುಕ್ತ ಡಿಸೆಂಬರ್ 29 ರಂದು ರಾಜ್ಯದ ಎಲ್ಲಾ ಶಾಲಾ ಕಾಲೇಜಗಳಲ್ಲಿ ವಿಶ್ವ ಮಾನವ ದಿನ ಆಚರಿಸುವಂತೆ  ಸೂಚನೆ ನೀಡಲಾಗಿದೆ. ಹಾಗಾಗಿ ಭಾನುವಾರ ಶಾಲಾ ಕಾಲೇಜು ರಜೆ ಇರುವುದಿಲ್ಲ.

ಈ ಕುರಿತು ಶಿಕ್ಷಣ ಇಲಾಖೆ ನಿರ್ದೇಶಕರು ರಾಜ್ಯದ ಎಲ್ಲಾ ಶಾಲಾ ಕಾಲೇಜನಲ್ಲಿ ವಿಶ್ವ ಮಾನವ ದಿನ ಆಚರಿಸಲು ಸೂಚನೆ ನೀಡಿದ್ದು, ವಿಶ್ವ ಮಾನವ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವಂತೆ ಜ್ಞಾಪಾನ ಪತ್ರ ಕಳುಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾನುವಾರ ಶಾಲಾ ಕಾಲೇಜುಗಳಲ್ಲಿ ರಜೆ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆ ನಿರ್ದೇಶಕರು ಹೇಳಿದ್ದರೆ.