10 ಮಂದಿ ಅರ್ಹರಿಗೆ ಮಾತ್ರ ಕ್ಯಾಬಿನೆಟ್ ಭಾಗ್ಯ : ಮೂಲ ಬಿಜೆಪಿ ಶಾಸಕರಿಗೆ ಮತ್ತೆ ನಿರಾಸೆ.....
ಬೆಂಗಳೂರು : ಇಂದು ಬೆಳಿಗ್ಗೆ 10:30 ಕ್ಕೆ ರಾಜಭವನದಲ್ಲಿ ಬಿಎಸ್ ವೈ ಸಂಪುಟ ವಿಸ್ತರಣೆಯಾಗಿದ್ದು, ಅರ್ಹ 10 ಶಾಸಕರು ಯಡಿಯೂರಪ್ಪ ಸಂಪುಟ ಸೇರಿದರು. 10+3 ಫಾರ್ಮುಲಾ ಕೈಬಿಟ್ಟ ಹೈಕಮಾಂಡ್ ಕೇವಲ 10 ಜನರ ಸೇರ್ಪಡೆಗೆ ಗ್ರೀನ್ ಸಿಗ್ನಲ್ ನೀಡಿತ್ತು.
ಉಪಚುನಾವಣೆಯಲ್ಲಿ ಗೆದ್ಡಿರುವ 11 ಅರ್ಹ ಶಾಸಕರ ಪೈಕಿ ಮಹೇಶ್ ಕುಮಠಳ್ಳಿ ಹೊರತುಪಡಿಸಿ ಉಳಿದ 10 ಶಾಸಕರು ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜುಭಾಯಿ ವಾಲ ಪ್ರತಿಜ್ಞಾವಿಧಿ ಬೋಧಿಸಿದರು.
ಸಂಪುಟ ಸೇರಿದ ನೂತನ ಸಚಿವರ ಪಟ್ಟಿ
ರಮೇಶ್ ಜಾರಕಿಹೊಳಿ
ಶ್ರೀಮಂತ್ ಪಾಟೀಲ್
ಆನಂದ್ ಸಿಂಗ್
ಬಿ.ಸಿ.ಪಾಟೀಲ್
ಭೈರತಿ ಬಸವರಾಜು
ಡಾ. ಸುಧಾಕರ್
ಕೆ.ಗೋಪಾಲಯ್ಯ
ಎಸ್.ಟಿ. ಸೋಮಶೇಖರ್.
ನಾರಾಯಣ ಗೌಡ.
ಶಿವರಾಮ್ ಹೆಬ್ಬಾರ್.
ಮೂಲ ಬಿಜೆಪಿ ಶಾಸಕರಿಗೆ ನಿರಾಸೆ...
ಇನ್ನು ಮಂತ್ರಿಗಿರಿಯ ಕನಸು ಕಾಣುತಿದ್ದ ಮೂಲ ಬಿಜೆಪಿ ಶಾಸಕರಿಗೆ ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಶಾಕ್ ನೀಡಿತು. ವಲಸಿಗರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದು, ಮೂಲ ಬಿಜೆಪಿ ಶಾಸಕರಿಗೆ ನಿರಾಸೆ ಉಂಟುಮಾಡಿದೆ. ಅದರಲ್ಲೂ ಕ್ಯಾಬಿನೆಟ್ ಸೇರುವ ನಾಯಕರಲ್ಲಿ ಪ್ರಮುಖವಾಗಿ ಹೆಸರು ಕೇಳಿಬರುತಿದ್ದ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ ಹಾಗೂ ಸಿ.ಪಿ ಯೋಗೇಶ್ವರ್ ಯಡಿಯೂರಪ್ಪರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತು ಸಮಾಲೋಚನೆ ನಡೆಸಿದರು.