ಯಮಹಾ yxr155 ಬೈಕ್ ಲಾಂಚ್ ಆಗಲಿದೆ ಫೆಬ್ರುವರಿ ಗಳ ಕೊನೆಯಲ್ಲಿ..!!!

ಯಮಹಾ ಕಂಪನಿಯ ಬೈಕ್ ಯೆಂದರೆ ಯಾರಿಗೆತಾನೇ ಪರಿಚಯ ಇಲ್ಲ ಹೇಳಿ ತನ್ನ ಶಕ್ತಿ, ಹಾಗೂ ರಸ್ತೆಹಿಡಿತಕ್ಕೆ ಹೆಸರುವಾಸಿ ಯಾಗಿರುವ ಸಂಸ್ಥೆ ಈಗ ಭಾರತದ ರಸ್ತೆಯಲ್ಲಿ ಹೊಸ ಬೈಕ್  ಪರಿಚಯಿಸುತ್ತಿದೆ. ಅದು ಯಾವ ಬೈಕ್ ಯಾವಾಗ ರಸ್ತೆಗೆ ಬರಲಿದೆ ಎನ್ನುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ಹಿಂದೆ ಒಂದು ಮಾತು ಇತ್ತು ಅದು ಲೋಕ ರೂಡಿ'ಸಹ , ಎಲ್ಲೋ ದೂರದಲ್ಲಿ ದೊಡ್ಡ ಶಬ್ದ ಮಾಡಿ ಬೈಕ್ ಬರುತಾಯಿದೆ ಯೆಂದರೆ ಅದು ಖಂಡಿತ ಯಮಹಾ rx  ಎಂದೇ ಜನರ ಮನಸಿನಲ್ಲಿ ಭಾವನೆ ಮೂಡುತ್ತಾ ಇತ್ತು . ಇದು ಕಾಲ ಕ್ರಮೇಣ ಆ ಮಾದರಿಯ ಬೈಕ್ ಉತ್ಪಾದನೆ ನಿಲ್ಲಿಸಿ ಬಿಟ್ಟಿತು, ಎಲ್ಲೋ ಈ ಕಂಪನಿ ಭಾರತದ ರಸ್ತೆಯಲ್ಲಿ ಮತ್ತೆ ಸದ್ದು ಮಾಡುವುದಿಲ್ಲ ಅಂತ ಬೈಕ್ ಪ್ರೇಮಿಗಳು ಮಾತು ಆಡಿಕೊಂಡಿರುವುದು ಉಂಟು. ನಂತರ ತನ್ನ ಸಾಮರ್ಥ್ಯ ಏನು ಅಂಥ ಎಲ್ಲರ ಹುಬ್ಬು-ಏರಿಸುವಂತೆ ಮಾಡಿದ ಸಂಸ್ಥೆ ಯಮಹಾ.

ಈಗ ತನ್ನ ಹೊಸ ಬೈಕ್ ಒಂದನ್ನು ಪರಿಚಯಿಸಲು ಮುಂದಾಗಿದೆ. Yxr 155 ಫೆಬ್ರವರಿಯಲ್ಲಿ ರಸ್ತೆಗೆ ಬರಬಹುದು ಎಂದು ಅಂದಾಜಿಸಲಾಗಿದೆ.
ಈ ಬೈಕ್ 153 cc ಇಂಜಿನ್ ಸಾಮರ್ಥ್ಯ ಹೊಂದಿದೆ bs6 ತಂತ್ರಜ್ಞಾನ ಸಹ ಇದೆ.
ಡ್ಯೂಎಲ್ ಚಾನೆಲ್ ABS .

ಈ ಬೈಕ್ ಕೊಂಚ ಹೊಸ ಅನುಭವ ನೀಡಿದೆ.
ರೆಟ್ರೊ ಶೈಲಿ ಹಾಗೂ ಆರಾಮ ದಾಯಕ ಅನುಭವ ನೀಡುವುದರಲ್ಲಿ ಎರಡನೇ ಮಾತಿಲ್ಲ. 
ಆಫ್ ರೋಡಿಂಗ್ ಹಾಗೂ ಸಿಟಿಯಲ್ಲಿ ಚಲಾವಣೆಗೆ ಈ ಬೈಕ್ ಉತ್ತಮ ಮಾದರಿಯಾಗಿದೆ. ಕಾರ್ಯಕ್ಷಮತೆ ಹಾಗೂ ನೋಡಲು ಅದ್ಭುತವಾಗಿ ಕಾಣುವ ಬೈಕ್. ಯುವಕರನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್ ವಿನ್ಯಾಸ ಮಾಡಲಾಗಿದೆ ಹಾಗೂ ಬೈಕ್ ಯುವಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬದುಕಿನ ಕುರಿತು ಹೆಚ್ಚು ಮಾತುಗಳು ಫೋಟೋ ಗಳು ಹರಿದಾಡುತ್ತಿವೆ.