ರಾಜ್ಯ ಸರ್ಕಾರಿ ದಿನಗೂಲಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದೆ...!

ಬೆಂಗಳೂರು : ರಾಜ್ಯದ ದಿನಗೂಲಿ ನೌಕರರಿಗೆ ರಾಜ್ಯ ಸರ್ಕಾರ ಸಂಕ್ರಾಂತಿ ಗಿಫ್ಟ್ ಎನ್ನುವಂತೆ ಬಂಫರ್ ಗಿಫ್ಟ್ ನೀಡಿದ್ದು, ನೌಕರರ ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ಶೇ.75ರಿಂದ ಶೇ.90ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಡಿಸೆಂಬರ್ 1ರಿಂದಲೇ ಪೂರ್ವಾನ್ವಯ ಆಗುವಂತೆ ದಿನಗೂಲಿ ನೌಕರರು ಶೇ.90ರ ಅನುಸಾರವಾಗಿ ತುಟ್ಟಿಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ಪಡೆಯಲಿದ್ದಾರೆ.

 

2012ರ ಅಡಿಯಲ್ಲಿನ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಂತೆ ಅರ್ಹ ದಿನಗೂಲಿ ನೌಕರರಿಗೆ ಸೆಪ್ಟಂಬರ್ 19, 2014ರ ಸರ್ಕಾರಿ ಆದೇಶದಂತೆ ನಿಗಧಿ ಪಡಿಸಲಾಗಿರುವ ಮಾನದಂಡಗಳಿಗೆ ಒಳಪಟ್ಟು, ದಿನಗೂಲಿ ನೌಕರರಿಗೆ ಶೇ.75ರಷ್ಟು ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ನೀಡಲಾಗುತ್ತಿತ್ತು. ಆದ್ರೇ ಇಂತಹ ತುಟ್ಟಿಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ರಾಜ್ಯ ಸರ್ಕಾರ ಶೇ.90ಕ್ಕೆ ಏರಿಕೆ ಮಾಡಿದೆ.


ಈ ಹಿನ್ನಲೆಯಲ್ಲಿ ಈ ಮೊದಲು ರಾಜ್ಯದ ದಿನಗೂಲಿ ನೌಕರರು ಶೇ.75ರಂತೆ ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ಪಡೆಯುತ್ತಿದ್ದನ್ನು ಶೇ.90ಕ್ಕೆ ಏರಿಕೆ ಮಾಡಲಾಗಿದೆ. ಇಂತಹ ಏರಿಕೆ ಮಾಡಲಾದಂತ ತುಟ್ಟಿ ಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ರಾಜ್ಯದ ದಿನಗೂಲಿ ನೌಕರರು ಡಿಸೆಂಬರ್ 1, 2019ಕ್ಕೆ ಪೂರ್ವಾನ್ವಯ ಆಗುವಂತೆ ಸದ್ಯದಲ್ಲಿಯೇ ಪಡೆಯಲಿದ್ದಾರೆ. ಈ ಮೂಲಕ ಸಿಹಿ ಸುದ್ದಿಯನ್ನು ರಾಜ್ಯ ಸರ್ಕಾರ ಸಂಕ್ರಾಂತಿ ಸಂದರ್ಭದಲ್ಲಿ ದಿನಗೂಲಿ ನೌಕರರಿಗೆ ನೀಡಿದೆ.