ಕೊಪ್ಪಳದ ಗವಿಮಠದಲ್ಲಿ ಪಂಚ ಕಳಸೋತ್ಸವ.....
ಪಂಚ ಕಳಸ್ತೋತ್ಸವ... ಶ್ರೀ ಗವಿಮಠ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಇಂದು ಬಸವ ಪಟ ಆರೋಹಣ ಎಂಬ ಧಾರ್ಮಿಕ ಕಾರ್ಯಕ್ರಮ ನಡೆಯಿತು ಬೆನ್ನಲ್ಲೇ ಪಂಚ ಕಳಸ್ತೋತ್ಸವ ಕಾರ್ಯಕ್ರಮ ನಡೆಯಿತು.ಸಾಮಾನ್ಯವಾಗಿ ಎಲ್ಲಾ ಮಠಮಾನ್ಯರು ಒಂದೇ ಕಳಸವಿರುತ್ತೇದೆ ಆದರೆ ಕೊಪ್ಪಳ ಶ್ರೀ ಗವಿಮಠ ಕರ್ತೃ ಶ್ರೀ ಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ೫ ಕಳಸಗಳು ಶೋಭಾಯಮಾನವಾಗಿರುತ್ತೇದೆ.ರಥೋತ್ಸವದ ದಿನಗಳು ಸಮೀಪಸುತ್ತಿರುವಾಗ ಈ ೫ ಕಳಸಗಳು ಒಂದು ವಾರದ ಮೊದಲೇ ಕೆಳಗೆ ಇಳಿಸಿಕೂಂಡು ಆಯಾ ಓಣಿಯ ದೈವ ದೇವರು ಕೊಂಡೊಯ್ಯುತ್ತಾರೆ ನಂತರ ಅವುಗಳನ್ನು ಸ್ವಚ್ಚಗೊಳಿಸಿ, ಶೃಂಗಾರಗೊಳಿಸಿ,ಶ್ರೀ ಗವಿಮಠಕ್ಕೆ ತರುತ್ತಾರ. ೧ನೇ ಕೊಪ್ಪಳದ ಬನ್ನಿಕಟ್ಟಿ ಭಾಗದ್ಧು,ಶ್ರೀ ಗೌರಿ ಶಂಕರ ದೇವಸ್ಥಾನದಿಂದ ಶ್ರೀ ಗವಿಮಠ ಬರುವುದು.೨ನೇ ವಿ.ಕೆ.ಸಜ್ಜನರು ಮಾಡಿಸಿದ್ದ ಕಳಸ ಅವರ ಮನೆಯಿಂದ ಶ್ರೀ ಗವಿಮಠಕ್ಕೆ ಬರುವುದು.೩ನೇ ಪಲ್ಲೇದವರ ಓಣಿಯ ಶ್ರೀ ಬಸವೇಶ್ವರ ದೇವಸ್ಥಾನದ ದೈವದಿಂದ ಶ್ರೀ ಗವಿಮಠಕ್ಕೆ ಬರುವುದು.೪ನೇ ಕೋಟೆ ರಸ್ತೆ ಶೀ ಮಹೇಶ್ವೇರ ದೇವಸ್ಥಾನದ ದೈವದಿಂದ ಶ್ರೀ ಗವಿಮಠಕ್ಕೆ ಬರುವುದು.೫ನೇ ಶ್ರೀ ಪ್ಯಾಟಿ ಈಶ್ವರ ದೇವಸ್ಥಾನ ದೈವದರಿಂದ ಮಠಕ್ಕೆ ಬರುವುದು.ಈ ಎಲ್ಲಾ ಕಳಸಗಳು ಆಯಾ ಓಣಿಯ ದೈವದವರು ೫ ಕಳಸಗಳನ್ನು ಗವಿಮಠಕ್ಕೆ ತಂದು ಗೋಪುರಕ್ಕೇರಿಸಿದರು.ಇದು ಪ್ರತಿ ವರ್ಷದ ಸಂಪ್ರದಾಯ.ರಾತ್ರಿ ಈ ಕಾರ್ಯಕ್ರಮ ನಡೆಯಿತು ನಂತರ ಗವಿಮಠಕ್ಕೆ ಆಗಮಿಸಿ ಜಂಗಮಯೋಗಿಗಳಿಗೆ ಪ್ರಸಾದ, ದಕ್ಷಿಣೆ, ತಾಂಬೂಲಾದಿಗಳನ್ನು ನೀಡಿ ಜಂಗಮಾರಾಧನೆಗೈದರು
ವರದಿ : ಶರಣಪ್ಪ ಕುಂಬಾರ ತಾವರಗೇರಾ