ಮೌನಂ ಚಿತ್ರಕ್ಕೆ ಶುಭ ಕೋರಿದ ಶಾಸಕ ಎಸ್ ಆರ್ ವಿಶ್ವನಾಥ್.!

ಸ್ಯಾಂಡಲ್  ವುಡ್ನಲ್ಲಿ ಹೊಸಬರೆ ಸೇರಿಕೊಂಡು ನಿರ್ಮಿಸಿರುವ ಮೌನಂ ಚಿತ್ರವು ಇದೆ ಫೆಬ್ರುವರಿ 21 ರಂದು ತೆರೆಕಾಣಲು ಸಿದ್ಧವಾಗಿದೆ. 
 ಈ ಚಿತ್ರಕ್ಕೆ ಇಂದು ಯಲಹಂಕದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ಎಸ್ ಆರ್ ವಿಶ್ವನಾಥ ರವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್ ಆರ್ ವಿಶ್ವನಾಥ್ ರವರು ಕನ್ನಡ ಚಿತ್ರರಂಗ ದಿನೆ ದಿನೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ  ಹಾಗೂ ಹೆಚ್ಚೆಚ್ಚು ಯುವಕರು ಚಿತ್ರಗಳ ನಿರ್ದೇಶನ,ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವುದು  ಖುಷಿಯ ವಿಷಯ 
ಅದೇ ರೀತಿಯಾಗಿ ಯುವಕರ ತಂಡ ಸೇರಿ ನಿರ್ಮಾಣ ಮಾಡಿರುವ ಮೌನಂ  ಚಿತ್ರವು  ಫೆಬ್ರುವರಿ 21 ರಂದು ಅಂದರೆ ಶಿವರಾತ್ರಿಯಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರ ಉತ್ತಮ ಪ್ರದರ್ಶನ ಕಂಡು ಶತದಿನೋತ್ಸವವನ್ನು ಪೂರೈಸಲಿ ಎಂದು ಶುಭಕೋರಿದರು.

ಈ  ಮೌನಂ ಚಿತ್ರವನ್ನು 'ನಿಹಾರಿಕಾ'ಮೂವೀಸ್ ಬ್ಯಾನರಡಿಯಲ್ಲಿ ಶ್ರೀ ಹರಿಯವರು ನಿರ್ಮಾಣ ಮಾಡಿದ್ದಾರೆ,ರಾಜ್ ಪಂಡಿತ್ ಅವರು ನಿರ್ದೇಶನ ಮಾಡಿದ್ದಾರೆ.

ಮುಖ್ಯಭೂಮಿಕೆಯಲ್ಲಿ ಮಯೂರಿ,ಬಾಲಾಜಿ ಶರ್ಮ,ಹಿರಿಯ ನಟ ಅವಿನಾಶ್ ನಟಿಸಿದ್ದಾರೆ