ಕಿವೀಸ್ ನೆಲದಲ್ಲಿ ಕಿವೀಸ್ ಗೆ ಮಣ್ಣು ಮುಕ್ಕಿಸಿದ ಭಾರತ
ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವನ 3ನೇ ಟಿ20 ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ರೋಹಿತ್ ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಓಪನರ್ಸ್ಗಳಾದ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಭಾರತಕ್ಕೆ ಭದ್ರಬುನಾದಿ ಹಾಕಿದರು. ರೋಹಿತ್ 40 ಎಸೆತದಲ್ಲಿ 6 ಬೌಂಡರಿ 3ಸಿಕ್ಸರ್ ಸಹಿತ 65 ರನ್ ಸಿಡಿಸಿ ಮಿಂಚಿದರು. ಕೆ ಎಲ್ ರಾಹುಲ್ 19 ಎಸೆತದಲ್ಲಿ 2 ಬೌಂಡರಿ 1 ಸಿಕ್ಸರ್ ಸಹಿತ 27 ರನ್ ಬಾರಿಸಿದರು.ಯುವ ಆಟಗಾರನಾದ ಶಿವಂ ದುಬೆಗೆ ಬಡ್ತಿ ನೀಡಿದರು ಅದರ ಸದುಪಯೋಗ ಪಡೆಯುವಲ್ಲಿ ವಿಫಲವಾಗಿ ಕೇವಲ 3 ಗಳಿಸಲು ಶಕ್ತರಾದರು. ನಂತರ ನಾಯಕ ಆಟವಾಡಿದ ವಿರಾಟ್ ಕೊಹ್ಲಿ 38 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 17, ಮನೀಷ್ ಪಾಂಡೆ 14 ಹಾಗೂ ಜಡೇಜಾ 10 ರನ್ ಗಳಿಸಿ, ಭಾರತ 179 ರನ್ ಗಳಿಸಲು ನೆರವಾದರು.
ಗುರಿ ಬೆನ್ನುಹತ್ತಿದ ಅತಿಥೇಯರು ತಂಡ ನಾಯಕ ವಿಲಿಯಮ್ಸ್ ಅವರ ಏಕಾಂಗಿ ಹೋರಾಟದ ಮೂಲಕ ಗೆಲ್ಲುವ ಅಷ್ಟರಲ್ಲಿ ಶಮಿ ಡ್ರಾ ಮಾಡಿಸಿದರು. ಕಿವೀಸ್ ಗೆಲ್ಲುವಿಗೆ ತಣ್ಣೀರು ಎರೆಚಿದನು. ನಂತರ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟ್ ಬೀಸಿದ ನ್ಯೂಜಿಲೆಂಡ್ 17 ರನ್ ಗಳಿಸಿತು. ಬ್ಯಾಟಿಂಗ್ ಇಳಿದ ಟೀಮ್ ಇಂಡಿಯಾದ ಆಟಗಾರರು ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ,ಕೊನೆಯ ಎರಡು ಬಾಲ್ ಗಳಲ್ಲಿ 11 ರನ್ ಅವಶ್ಯಕತೆ ಇತ್ತು ಮುಗಿಲೆತ್ತರಕ್ಕೆ ಎರಡು ಸಿಕ್ಸರ್ ಸಿಡಿಸುವ ಮೂಲಕ ಭಾರತಕ್ಕೆ ಗೆಲುವು ತಂದು ಕೊಟ್ಟರು. ಇದರ ಮೂಲಕ ಕೊಹ್ಲಿ ಬಳಗ ಸರಣಿಯನ್ನು ಇನ್ನು ಎರಡೂ ಪಂದ್ಯಗಳು ಬಾಕಿರುವಾಗಲೇ 3-0 ಅಂತರದಲ್ಲಿ ವಶಪಡಿಸಿಕೊಂಡಿತು.