ಜಿಕೆವಿಕೆ ಯಲ್ಲಿ ಸೃಷ್ಟಿಯಾಗಿದೆ ವಿಜ್ಞಾನ ಲೋಕ : ಜನರನ್ನು ಆಕರ್ಷಿಸುತ್ತಿರುವ ಮಾತನಾಡುವ ರೋಬೋಟ್.
ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಆಸಕ್ತಿ, ಪ್ರೇರಣೆ, ಹಾಗೂ ವೈಜ್ಞಾನಿಕ ವಿಚಾರಗಳನ್ನು ನೇರವಾಗಿ ನೋಡಿ ಜ್ಞಾನ ಸಂಪಾದನೆ ಮಾಡುವ ಸುವರ್ಣಾವಕಾಶ ಬಳ್ಳಾರಿ ರಸ್ತೆಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿಕೆವಿಕೆ) ಆಯೋಜಿಸಲಾಗಿದೆ. ಶುಕ್ರವಾರದಿಂದ ಆರಂಭವಾಗಿರುವ ಐದು ದಿನಗಳ ಕಾಲ ನೆಡೆಯಲಿರುವ '107ನೇ ಭಾರತೀಯ ವಿಜ್ಞಾನ ಸಮ್ಮೇಳನ' ಈ ಅವಕಾಶ ಕಲ್ಪಿಸಿದೆ.
ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಪೋಷಕರು ವಿಜ್ಞಾನ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಭಾರತೀಯ ವಿಜ್ಞಾನ ಕಾಂಗ್ರೆಸ್ ಅಸೊಸಿಯೇಷನ್‌ನ ಅಧ್ಯಕ್ಷ ಪ್ರೊ.ಕೆ.ಎಸ್ ರಂಗಪ್ಪ ಮನವಿ ಮಾಡಿದರು.
ದೇಶದ ಹಲವು ಪ್ರಮುಖ ವಿಶ್ವವಿದ್ಯಾಲಯಗಳು, ತರಬೇತಿ ಕೇಂದ್ರಗಳು, ಸರಕಾರಿ ಸಂಸ್ಥೆಗಳು ಭಾಗವಹಿಸುತ್ತಿವೆ. ಜೆಕೆವಿಕೆ ಆವರಣದಲ್ಲಿ ವಿಜ್ಞಾನದ ಹೊಸ ಲೋಕವೇ ಸೃಷ್ಠಿಯಾಗಿದೆ. ಚಟುವಟಿಕೆಗಳು, ಸಂಶೋಧನೆಗಳು, ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ವಸ್ತು ಪ್ರದರ್ಶನದಲ್ಲಿ
ಸಿರೇನಾ ಟೆಕ್ನಾಲಜೀಸ್‌ನ ಮಾತನಾಡುವ 'ನಿನೋ' ರೋಬಾಟ್ ಪ್ರಮುಖ ಆಕರ್ಷಣೆಯಾಗಿದೆ. ಹಾಗೂ ವಿವಿಧ ಕೆಮಿಕಲ್‌ಗಳ ಮಿಶ್ರಣದಿಂದ ಹೊರ ಹೊಮ್ಮುವ ರಿಯಾಕ್ಷನ್, ಅಪಾಯ, ಅನುಕೂಲಗಳನ್ನು ನೇರವಾಗಿ ನೋಡಲು ಇಲ್ಲಿ ಅವಕಾಶವಿದೆ. ಸೌರಮಂಡಲದಲ್ಲಿನ ಭೂಮಿ ಮತ್ತು ಗ್ರಹಗಳ ಚಲನೆ ಕುರಿತು ಪರದೆ ಮೂಲಕ ಕಿರುಚಿತ್ರ ವೀಕ್ಷಣೆ ಮಾಡಬಹುದು. ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಗಳ ಅನ್ವೇಷಣೆ ಮತ್ತು ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅಲ್ಲದೆ, ಅವುಗಳ ಕುರಿತು ವಿವರಣೆಯೂ ಇದೆ.
ಸಮ್ಮೇಳನದೊಳಗೆ ಹೋಗಿ ಬರುವವರಿಗೆ ಹೊಸ ಅನುಭವದ ಜೊತೆಗೇ ವಿಜ್ಞಾನದ ಕುರಿತು ಸಾಕಷ್ಟು ಮಾಹಿತಿ ಸಿಗುವುದು ನಿಶ್ಚಿತ.