ಕಂಕಣ ಸೂರ್ಯಗ್ರಹಣ ದೇಶದ ಗಮನ ತನ್ನತ್ತ ಸೆಳೆದ ಬಂಡೀಪುರದ ಮಂಗಲ ಗ್ರಾಮ.
ಆಲ್ಮಾ ನ್ಯೂಸ್/ ಮಹದೇವ ಪ್ರಸಾದ್ ಯಡಹುಂಡಿ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಗಳ ಗ್ರಾಮ ನಾಳೆ ನಡೆಯಲಿರುವ ಕಂಕಣ ಸೂರ್ಯಗ್ರಹಣ ಇಡೀ ದೇಶವೇ ತಿರುಗಿ ನೋಡುವ ಹಾಗೆ ಮಾಡಿದೆ ಡಿ.26ರಂದು ಬೆಳಿಗ್ಗೆ 8.5ರಿಂದ 11ರ ತನಕ ಕಂಕಣ ಸೂರ್ಯ ಗ್ರಹಣ ಸಂಭವಿಸಲಿದೆ.
ದಕ್ಷಿಣ ಭಾರತದಲ್ಲಿ ಸೂರ್ಯಗ್ರಹಣವು ವಿಶೇಷವಾಗಿ ಗುಂಡ್ಲುಪೇಟೆ ತಾಲೂಕಿನ ಮಂಗಳ ಗ್ರಾಮದಲ್ಲಿ ಪೂರ್ಣಪ್ರಮಾಣದಲ್ಲಿ ಗೋಚರವಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಸೂರ್ಯಗ್ರಹಣವು ವಿವಿಧ ಪ್ರಮಾಣದಲ್ಲಿ ಗೋಚರವಾಗುತ್ತದೆ. ಮುಂಬೈನಲ್ಲಿ ಶೇ.78ರಷ್ಟು. ಬೆಂಗಳೂರಿನಲ್ಲಿ ಶೇ.89.4 . ಚೆನ್ನೈನಲ್ಲಿ ಶೇಕಡ 84. ರಷ್ಟು ಗೋಚರಿಸಲಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಗಲ ಗ್ರಾಮದಲ್ಲಿ ಸೂರ್ಯ ಗ್ರಹಣವು 9:00 ರಿಂದ 9.30 ರ ನಡುವೆ ಪೂರ್ಣಪ್ರಮಾಣದಲ್ಲಿ ಅಂದರೆ ಶೇಕಡ 98ರಷ್ಟು ಸೂರ್ಯಗ್ರಹಣವು ಗೋಚರಿಸಲಿ ಗ್ರಹಣ ಸಮಯದಲ್ಲಿ ಸೂರ್ಯ ಚಂದ್ರನ ಅಂಚು (ಭೂಮಿ ಮತ್ತು ಸೂರ್ಯನ ನಡುವೆ ಬರುವ ಚಂದ್ರನ ನೆರಳು ಭೂಮಿಯ ಮೇಲೆ ಬೀಳುತ್ತದೆ) ಉಂಗುರ ಆಕಾರದಲ್ಲಿ ಹೊಳೆಯುವುದರಿಂದ ಇದನ್ನು 'ರಿಂಗ್ ಆಫ್ ಫೈರ್'(ಬೆಂಕಿ ಉಂಗುರ) ಎಂದೇ ಕರೆಯಲಾಗುತ್ತದೆ. ಭಾರತದ ಎಲ್ಲ ಭಾಗಗಳಲ್ಲಿಯೂ ಸಂಪೂರ್ಣ ಗ್ರಹಣ ಗೋಚರಿಸುವುದಿಲ್ಲ. ಮದುರೈ, ಕೊಯಮತ್ತೂರು, ಚೆರವತ್ತೂರು ಹಾಗೂ ಕೋಯಿಕೋಡ್‌ನಲ್ಲಿ ಪೂರ್ಣ ಸೂರ್ಯ ಗ್ರಹಣ ಕಾಣಲು ಸಾಧ್ಯವಿದೆ.