ಸಚಿವ ಸಂಪುಟ ವಿಸ್ತರಣೆ ನಿರ್ಧಾರದ ಹಿನ್ನೆಲೆ; ಅಮಿತ್ ಶಾ ಭೇಟಿಗೆ ಸಮಯ ನಿಗದಿ...!
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ರಾಜ್ಯಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ತೀರ್ಮಾನ ಕೈಗೊಳ್ಳಲು ಅಮಿತ್ ಶಾ ಭೇಟಿಗಾಗಿ ರಾಜ್ಯ ನಾಯಕರಗೆ ಸಮಯ ನಿಗದಿಯಾಗಿದೆ.
ಇಂದು ಸಂಜೆ 6.30ರಿಂದ 7.30ರವರೆಗೆ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿದ್ದು, ಕೇವಲ 1 ಗಂಟೆ ಸಮಯ ಮಾತ್ರ ಅಮಿತ್ ಶಾ ಭೇಟಿ ಸಾಧ್ಯವಾಗಿದೆ. ಆದರೆ ಒಂದು ಗಂಟೆ ಅವಧಿಯಲ್ಲಿ ಸಚಿವ ಸಂಪುಟದ ಬಗ್ಗೆ ಅಂತಿಮ ತೀರ್ಮಾನ ಅಸಾಧ್ಯ. ರಾಜ್ಯದಲ್ಲಿಯೇ ಎಲ್ಲವೂ ಬಗೆಹರಿಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಎಷ್ಟು ಜನರಿಗೆ ಮಂತ್ರಿ ಸ್ಥಾನ ಕೊಡಬೇಕು ಅನ್ನೋ ಗೊಂದಲ, ಸೋತವರಿಗೆ ಏನು ಮಾಡುವುದು ಅನ್ನೋ ವಿಚಾರ, ಎಂಎಲ್ ಸಿ ಮಾಡಿ ಬಳಿಕ ಮಂತ್ರಿ ಮಾಡಬೇಕಾ ಎಂಬ ಎಲ್ಲಾ ವಿಚಾರದ ಬಗ್ಗೆ ಚರ್ಚೆ ಮಾಡಲು 1 ಗಂಟೆ ಅವಧಿ ಸಾಕಾಗುವುದಿಲ್ಲ. ಇದೇ ಕಾರಣಕ್ಕೆ ಇಂದೇ ಸಚಿವ ಸಂಪುಟದ ಬಗ್ಗೆ ಅಂತಿಮ ತೀರ್ಮಾನ ಕಷ್ಟ ಎನ್ನಲಾಗಿದೆ. ಹಾಗೇ ಒಂದು ಗಂಟೆ ಅವಧಿಯಲ್ಲಿ ಈ ವಿವಾದ ಬಗೆಹರಿಯದಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ದೆಹಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತೆ ಎನ್ನಲಾಗಿದೆ.