ನಿರ್ಮಲಾ ಸೀತಾರಾಮನ್ ಎರಡನೇ ದಿನದ ಸುದ್ದಿಗೋಷ್ಠಿ : ಮಧ್ಯಮ ವರ್ಗಕ್ಕೆ ಕೇಂದ್ರದ ಗಿಫ್ಟ್ : ಗ್ರಹಸಾಲಕ್ಕೆ 70, 000 ಕೋಟಿ ಮೀಸಲಿಟ್ಟ ಕೇಂದ್ರ : ವಲಸೆ ಕುಟುಂಬಗಳಿಗೆ ಕಾರ್ಡ್ ಇಲ್ದೆ ಇದ್ರೂ ಸಿಗುತ್ತೆ ರೇಷನ್.....
ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಪ್ಯಾಕೇಜ್ ನ ಕೆಲವು ಯೋಜನೆಗಳನ್ನು ನಿನ್ನೆ ಪ್ರಕಟಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಮನ್ ಇಂದು ಎರಡನೇ ದಿನದ ಸುದ್ದಿಗೋಷ್ಠಿಯಲ್ಲಿ ಇನ್ನಷ್ಟು ಯೋಜನೆಗಳನ್ನು ಘೋಷಣೆ ಮಾಡಿದರು.
ನಿನ್ನೆ ಬ್ಯಾಂಕಿಂಗ್ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಯೋಜನೆಗಳನ್ನು ಘೋಷಿಸಿದ್ದ ವಿತ್ತಸಚಿವೆ ಇಂದು ರೈತರು, ವಲಸೆ ಕಾರ್ಮಿಕರು ಹಾಗೂ ಮಧ್ಯಮವರ್ಗಕ್ಕೆ ಹಲವಾರು ಯೋಜನೆಗಳನ್ನು ಪ್ರಕಟಿಸಿದರು. ಇಂದಿನ ಸುದ್ದೀಗೋಷ್ಠಿಯ ಪ್ರಮುಖ ಹೈಲೈಟ್ಸ್ ಇಲ್ಲಿವೆ.....
* ನಬಾರ್ಡ್ ಮೂಲಕ ರೈತರಿಗೆ 30,000 ಕೋಟಿ ತುರ್ತು ಬಂಡವಳ..
* ವಲಸೆ ಕಾರ್ಮಿಕರಿಗೆ 5 ಕೆಜಿ ಅಕ್ಕಿ/ ಗೋಧಿ ಜೊತೆಗೆ 1 ಕೆಜಿ ಧಾನ್ಯ ನೀಡಲು ತೀರ್ಮಾನ.....ರೇಷನ್ ಕಾರ್ಡ್ ಇಲ್ಲದಿದ್ದರೂ ವಲಸೆ ಕಾರ್ಮಿಕರು ಪಡಿತರ ಪಡೆಯಬಹುದು.
* ಒಂದು ದೇಶ ಒಂದು ಕಾರ್ಡ್ ಯೋಜನೆ ಜಾರಿಗೆ ನಿರ್ಧಾರ..ಈ ಯೋಜನೆ ಜಾರಿಯಿಂದ ಯಾವುದೇ ರೇಷನ್ ಕಾರ್ಡ್ ಹೊಂದಿರುವವರು ದೇಶದ ಯಾವ ರಾಜ್ಯದಲ್ಲಾದರೂ ಪಡಿತರ ಪಡೆಯಬಹುದು.
* ಮಧ್ಯಮ ವರ್ಗದವರಿಗೆ ಗ್ರಹಸಾಲ ನೀಡಲು 70,000 ಕೋಟಿ ಸಾಲ ಮೀಸಲು...6 ರಿಂದ 18 ಲಕ್ಷ ವಾರ್ಷಿಕ ಆದಾಯ ಇರೋರಿಗೆ ಈ ಯೋಜನೆಯಿಂದ ಲಾಭ..
* ಬೀದಿಬದಿ ವ್ಯಾಪಾರಿಗಳಿಗೆ ವಿಶೇಷ ಯೋಜನೆಗೆ 5000 ಕೋಟಿ ಮೀಸಲು....ಈ ಯೋಜನೆ ಅಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ 10,000 ವರಗೆ ಸಾಲ ಸೌಲಭ್ಯ...ಒಟ್ಟು 50 ಲಕ್ಷ ಸಣ್ಣ ವ್ಯಾಪಾರಿಗಳಿಗೆ ಈ ಯೋಜನೆಯಿಂದ ಲಾಭ.
* ವಲಸೆ ಕಾರ್ಮಿಕರಿಗೆ ನಗರ ಪ್ರದೇಶದಲ್ಲಿ ಕಡಿಮೆ ಬಾಡಿಗೆಗೆ ಮನೆ ನೀಡಲು ಯೋಜನೆ...ಸರ್ಕಾರಿ ಪ್ರಾಯೋಜಿತ ವಸತಿಗಳನ್ನು ಈ ಯೋಜನೆಗೆ ಬಳಸಿಕೊಳ್ಳಲಾಗುವುದು.
* ರೈತರ ಬೆಳೆಗಳನ್ನು ಬೆಂಬಲ ಬೆಲೆ ಕೊಟ್ಟು ಖರೀದಿಸಲು 2700 ಕೋಟಿ ಮೀಸಲು..
* 2.5 ಕೋಟಿ ಹೊಸ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ...
ಹೀಗೆ 20 ಲಕ್ಷ ಕೋಟಿ ಪ್ಯಾಕೇಜ್ ನ ಹಲವು ಮಹತ್ವದ ಯೋಜನೆಗಳನ್ನು ವಿತ್ತಸಚಿವೆ ನಿರ್ಮಲಾ ಸಿತಾರಮನ್ ದೇಶದ ಜನರಿಗೆ ಪ್ರಕಟಪಡಿಸಿದರು. ವಲಸಿಗರ ವಿಚಾರದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ನಲ್ಲಿ ವಲಸಿಗರಿಗೆ ಹೆಚ್ಚಿನ ಮಹತ್ವ ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜೊತೆಗೆ ರೈತರು ಹಾಗೂ ಮಧ್ಯಮ ವರ್ಗಕ್ಕೂ ಪ್ಯಾಕೇಜ್ ನಲ್ಲಿ ಸಾಕಷ್ಟು ಗಿಫ್ಟ್ ನೀಡಿದೆ.