ತೃಣಮೂಲ ಕಾಂಗ್ರೇಸ್‌ನ ಮತ್ತೊಂದು ವೀಕೆಟ್ ಪತನ – ರಾಜ್ಯಸಭೆ ಸದಸ್ಯ ತ್ರೀವೇದಿ ರಾಜೀನಾಮೆ

ಪಶ್ಚಿಮ ಬಂಗಾಳದ ಚುನವಾಣೆ ಹಿನ್ನಲೆಯಲ್ಲೇ ಈಗ ತೃಣಮೂಲ ಕಾಂಗ್ರೇಸ್‌ಗೆ ಮತ್ತೆ ಹಿನ್ನಡೆಯಾಗಿದೆ. ಕೇಂದ್ರದ ಮಾಜಿ ಸಚಿವ ದಿನೇಶ್‌ ತ್ರಿವೇದಿ ರಾಜ್ಯಸಭೆ ಸದಸ್ಯತ್ವಕ್ಕೆ ರಾಜೀನಾಮೇ ನೀಡಿದ್ದಾರೆ. ಸದನದಲ್ಲಿಯೇ ರಾಜೀನಾಮೆ ಸಲ್ಲಿಸಿದ ಅವರು ರಾಜ್ಯಸಭೆಯ ಸಭಾಪತಿ ಮತ್ತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುರವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಪಕ್ಷವು ಯಾವಗ ಕಾರ್ಪೋರೇಟ್‌ ಉದ್ಯಮಿಗಳ ಕೈ ಸೇರುತ್ತೋ….. ಯಾರು ರಾಜಕೀಯದ ಬಗ್ಗೆ ಸ್ವಲ್ಪವು ತಿಳುವಲಿಕೆಯಿಲ್ಲದ ಪಕ್ಷ ನಡೆಸುತ್ತಾರೋ… ಅವರು ನನ್ನ ಹಿರಿಯ ರಾಜಕಾರಣಿಗಳಾಗುತ್ತಿದ್ದಾರೆ… ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ಯಾರು ಏನು ಮಾಡಲು ಸಾಧ್ಯ? ಎಂದು ತ್ರೀವೇದಿ ಕಿಡಿಕಾರಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷ ತೃಣಮೂಲ ಕಾಂಗ್ರೇಸ್ನ ಚುನಾವಣೆಯ ಕಾರ್ಯಯೋಜನೆಗಾಗಿ ಚುನಾವಣಾ ತಂತ್ರಗಾರ ಪ್ರಶಾಂತ ಕೀಶೋರ್‌ರನ್ನು ನೇಮಿಸಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋವಿಡ್‌ ಸಂದರ್ಭದಲ್ಲಿ ತೋರಿದ ನಾಯಕತ್ವವನ್ನು ಹೊಗಳಿದ ತ್ರೀವೆದಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾಗಳ ಬಗ್ಗೆ ಕೂಡ ಪ್ರಸ್ಥಾಪಿಸಿದರು. ಈ ಘಟನೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ತ್ರಣಮೂಲ ಕಾಂಗ್ರೇಸ್‌ನ ನಾಯಕರು, ಈ ಹಿಂದೆ ಇಲ್ಲ ಸಲ್ಲದ ಮಾತುಗಳನ್ನಾಡಿದ್ದಕ್ಕಾಗಿ ಮೂರು ಬಾರಿ ಅವರಿಗೆ ಎಚ್ಚರಿಕೆ ನೀಡಿದ್ದೇವು. ಅವರ ರಾಜೀನಾಮೆ ಬೇರೊಬ್ಬ ಕೆಳ ಮಟ್ಟದಲ್ಲಿ ಕೆಲಸ ಮಾಡುವ ಕಾರ್ಯಕರ್ತನಿಗೆ ರಾಜ್ಯಸಭೆಗೆ ಕಳುಹಿಸಲು ಉತ್ತಮ ಅವಕಾಶ ಎಂದಿದ್ದಾರೆ.”ದಿನೇಶ್‌ ತ್ರಿವೇದಿ ಅವರು ನಮ್ಮನ್ನು ಇನ್ನೂ ಭೇಟಿಯಾಗಿಲ್ಲ, ಆದರೆ ತೃಣಮೂಲ ಕಾಂಗ್ರೇಸನ್ನು ಅಧಿಕಾರದಿಂದ ಕೆಳಗಿಳಿಸುವ ನಿಟ್ಟಿನಲ್ಲಿ ಅವರನ್ನು ಪಕ್ಷಕ್ಕೆ ಸ್ವಾಗತಿಸುವುತ್ತೇವೆ” ಎಂದು ಬಿಜೆಪಿಯ ನಾಯಕರು ತಿಳಿಸಿದ್ದಾರೆ.

ವರದಿ: ಮಂಜುನಾಥ್‌ ಅಜಿತ್‌