ಸುಶಾಂತ್ ಸಿಂಗ್ ಗೆ ನಮನ ಸಲ್ಲಿಸಿದ ಅಲ್ವಿದಾ
ಸುಶಾಂತ್ ಸಿಂಗ್ ರಾಜಪುತ್ ಗೆ ನಮನ ಸಲ್ಲಿಸಬೇಕೆನ್ನುವ ಉದ್ದೇಶದೊಂದಿಗೆ ಅಲ್ವಿದಾ ಎನ್ನುವ ಹಿಂದಿ ಆಲ್ಬಮ್ ಸಾಂಗ್ಸ್ 12 ನೇ ತಾರೀಖಿನಂದು ಬೆಂಗಳೂರಿನ ಟೆಕ್ ಪಾರ್ಕ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಆಲ್ಬಮ್ ನ ಪ್ಲೇ ಟೋಮ್ ಸಂಸ್ಥೆ ಲಾಂಚ್ ಮಾಡಿದ್ದು, ವಿನಯ್ ಚಂದ್ರ ರಾಗ ಸಂಯೋಜನೆ ಮಾಡಿದ್ದು, ಹಾಡುಗಳನ್ನ ಹಾಡುವುದಲ್ಲದೆ ವಿಡಿಯೋ ಸಾಂಗ್ಸ್ ನಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ. ಅಲ್ವಿದಾ ಆಲ್ಬಮ್ ಸಾಂಗ್ಸ್ ನ ನಿರ್ದೇಶನದ ಜವಾಬ್ದಾರಿಯನ್ನು ಶ್ರೀ ಹೊತ್ತುಕೊಂಡರೆ, ಅನುಮೋಧ್ ಗೀತೆ ರಚನೆಯನ್ನು ಮಾಡಿದ್ದಾರೆ. ಶ್ರೀ ಮತ್ತು ಶೀತಲ್ ಆಲ್ಬಮ್ ಗೆ ಬಂಡವಾಳ ಹಾಕಿದ್ದಾರೆ.
ಸಾಧನೆಯ ಕುರಿತು ಮಾತನಾಡಿಲ್ಲ
ಕಾರ್ಯಕ್ರಮದಲ್ಲಿ ಸಿನಿಮಾ ಕಲಾವಿದರು ಆಗಮಿಸಿದ್ದರು. ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು, ಸಂಗೀತ ನಿರ್ದೇಶಕ ವಿ. ಮನೋಹರ್ ಇನ್ನು ಮುಂತಾದವರು ವೇದಿಕೆಯನ್ನ ಅಲಂಕರಿಸಿದ್ದರು. ಸುಶಾಂತ್ ಸಿಂಗ್ ನಮ್ಮನ್ನು ಅಗಲಿದಾಗ, ಯಾರು ಸಹ ಇವರ ಸಾಧನೆಯ ಕುರಿತು ಮಾತನಾಡಿಲ್ಲ, ಹೋಗುವ ಸಮಯದಲ್ಲಿ ಸರಿಯಾಗಿ ಕಳುಹಿಸಿ ಕೊಟ್ಟಿಲ್ಲ. ಆದ್ದರಿಂದ ಅಲ್ವಿದಾ ಎನ್ನುವ ಆಲ್ಬಮ್ ಸಾಂಗ್ಸ್ ಮೂಲಕ ಸುಶಾಂತ್ ಸಿಂಗ್ ಗೆ ನಮನ ಸಲ್ಲಿಸಬೇಕೆನ್ನುವುದು ನಮ್ಮ ಉದ್ದೇಶ ಆಗಿತ್ತು. ಈ ಹಾಡುಗಳಲ್ಲಿ ಸುಶಾಂತ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ವಿನಯ್ ಚಂದ್ರ ಹೇಳಿದ್ದಾರೆ.
ಸಾಧನೆಯ ಮೊದಲ ಹೆಜ್ಜೆ
ನಾನು ವಿನಯ್ ಚಂದ್ರ ಗೆ ಆಶೀರ್ವಾದ ಮಾಡುವುದಕ್ಕೆ ಬಂದಿದ್ದೀನಿ. ವಿನಯ್ ತಂದೆ ಸುರೇಶ್ ಚಂದ್ರ ನನ್ನ ಆತ್ಮೀಯವಾದ ಸ್ನೇಹಿತ. ಸಂಜಯವಾಣಿ ಪತ್ರಿಕೆಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಆಗ ವಿನಯ್ ಚಿಕ್ಕ ಮಗು, ಈಗ ಸಾಧನೆಯ ಮೊದಲ ಹೆಜ್ಜೆಯನ್ನು ಇಟ್ಟಿರುವುದು ಬಹಳ ಸಂತಸದ ವಿಷಯವಾಗಿದೆ ಎಂದು ವಿ.ಮನೋಹರ್ ಹೇಳಿದ್ದಾರೆ.
ಅಣ್ಣಾವ್ರ ಹಾಡುಗಳಿಂದ ವ್ಯಾಯಾಮ ಶುರು
ಡಾಕ್ಟರ್ ರಾಜ್ ಕುಮಾರ್ ಅವರ ಹಾಡುಗಳನ್ನ ಕೇಳುತ್ತ, ನಾನು ವ್ಯಾಯಾಮ ಶುರು ಮಾಡುತ್ತೇನೆ. ಮೊದಲು ಅಣ್ಣಾವ್ರ ಹಾಡುಗಳು ನಂತರ ಬೇರೆ ಭಾಷೆಯ ಹಳೆ ಹಾಡುಗಳನ್ನ ಕೇಳುತ್ತೇನೆ. ಸುಶಾಂತ್ ಸಿಂಗ್ ನ ನೆನೆದು, ಮಾಡಿರುವ ಆಲ್ಬಮ್ ನನಗೆ ತುಂಬಾ ಇಷ್ಟವಾಗಿದೆ. ಹಾಡಿನ ತುಣಕನ್ನು ನೋಡಿ, ನಾನು ಭಾವುಕನಾದೆ. ವಿನಯ್ ಚಂದ್ರನ ಎಲ್ಲಾ ಕನಸುಗಳು ನನಸಾಗಲಿ ಎಂದು ಥ್ರಿಲ್ಲರ್ ಮಂಜು ಹೇಳಿದ್ದಾರೆ.
ಬರಹ: ಶ್ರೀ ಹರ್ಷ